ನಮ್ಮ ಕಾಂಗ್ರೆಸ್ ಪಕ್ಷ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಬ್ಯಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹೊತ್ತಿಸಿದೆ. ಪ್ರಿಯಾಂಕ್ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಶತಮಾನ ಪೂರೈಸಿರುವ, ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ರಾಷ್ಟ್ರದ ಹಾಗೂ ವಿಶ್ವದ ಏಕೈಕ ಮಹಾನ್ ದೇಶಭಕ್ತರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಪ್ರಖರ ಸತ್ಯವನ್ನು ಸಚಿವ ಪ್ರಿಯಾಂಕ್ ಅವರು ತಮ್ಮ ಹತಾಶೆಯ ಮನಸ್ಸಿನ ಬಾಗಿಲ ಕಿಂಡಿಯಿಂದ ಇಣುಕಿ ನೋಡಲಿ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
Congress Minister Priyank Kharge's statement that we will ban the Rashtriya Swayamsevak Sangh (RSS) if our Congress party comes to power at the Centre again has ignited a firestorm in state politics. RSS Priyank Kharge #Congress #RSS #StatePolitics #PriyankKharge #BYVijayendra #MPRenukachrya #CentralGovernment #BJP #Congress
Also Read
'ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ಆರ್‌ಎಸ್‌ಎಸ್ ಬ್ಯಾನ್' :: https://kannada.oneindia.com/news/karnataka/if-our-government-comes-to-power-at-the-centre-we-will-ban-rss-priyank-kharge-419077.html?ref=DMDesc
ಗೃಹಲಕ್ಷ್ಮೀ ಹಣ ದಿಢೀರ್ 1000 ರೂಪಾಯಿಗೆ ಇಳಿಕೆ ಮಾಡುವ ಸಾಧ್ಯತೆ? Gruha Lakshmi :: https://kannada.oneindia.com/news/karnataka/cm-siddaramaiah-government-supporting-gruhalakshmi-but-this-is-what-discussion-going-on-social-media-419075.html?ref=DMDesc