ಕೋಟಾ(ರಾಜಸ್ಥಾನ): ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಮತ್ತು ಹೊಳೆಗಳು ಉಕ್ಕಿ ಹರಿಯುತ್ತಿವೆ. ರಾಮಗಂಜ್ ಮಂಡಿ ಪ್ರದೇಶದಲ್ಲಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಕುಡಯ್ಲಾ, ದಿಯೋಲಿ ಖುರ್ದ್, ರಾವ್ಲಿ, ಖೈರಾಬಾದ್ ಮತ್ತು ಸತಲ್ಖೇಡಿ ಪ್ರದೇಶಗಳು ಮುಳುಗಿವೆ. ಕುಂಬ್ಕೋಟ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕುಡಯ್ಲಾ ಕಾಲುವೆಯ ನೀರು ಮನೆಗಳಿಗೆ ನುಗ್ಗಿದೆ. ಕೋಟಾ ಬ್ಯಾರೇಜ್‌ನಿಂದ 2.90 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ನೀರು ತಗ್ಗು ಪ್ರದೇಶಗಳಲ್ಲಿ ತುಂಬಿದೆ. ಹೀಗಾಗಿ, ಕೋಟಾದಿಂದ ಧೋಲ್‌ಪುರದವರೆಗೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಪ್ರವಾಹ ಪ್ರದೇಶದ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ.ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ: ಮಳೆಯಿಂದಾಗಿ ರಾಮಗಂಜ್ ಮಂಡಿಯಿಂದ ಸುಕೇತ್ ರಾಜ್ಯ ಹೆದ್ದಾರಿ 9ಬಿ ವರೆಗಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ ಎಂದು ರಾಮಗಂಜ್ ಮಂಡಿ ಪೊಲೀಸ್ ಠಾಣಾಧಿಕಾರಿ ಮನೋಜ್ ಸಿಂಗ್ ಸಿಕರ್ವಾರ್ ತಿಳಿಸಿದರು. ಜನವಸತಿ ಪ್ರದೇಶಗಳಲ್ಲಿ ಚಂಬಲ್ ನೀರು: ಚಂಬಲ್ ನದಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನೀರು ಬರುತ್ತಿದೆ. ರಾಣಾ ಪ್ರತಾಪ್ ಸಾಗರ್ ಅಣೆಕಟ್ಟು, ಜವಾಹರ್ ಸಾಗರ್ ಅಣೆಕಟ್ಟು ಮತ್ತು ಕೋಟಾ ಬ್ಯಾರೇಜ್‌ನಿಂದ ನೀರು ಹೊರಹಾಕಲಾಗುತ್ತಿದೆ. ಇದರಿಂದಾಗಿ ಕೋಟಾದ ಕೆಳಗಿನ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಇದನ್ನೂ ಓದಿ: ಕಪಿಲಾ ಪ್ರವಾಹ: ನಂಜನಗೂಡಿನ ದೇವಾಲಯ, ಮಲ್ಲನ ಮೂಲೆ ಮಠ ಜಲಾವೃತ - NANJANGUDU TEMPLE SUBMERGED