ಹಾವೇರಿ: ಅಂಬಿಗರ ಚೌಡಯ್ಯ ಐಕ್ಯ ಮಂಟಪ ವೀಕ್ಷಣೆಗೆ ತೆರಳಿದ್ದ ಸಚಿವ ಎಚ್.ಕೆ. ಪಾಟೀಲ್ ಮತ್ತು ಪೀಠದ ಶ್ರೀಗಳನ್ನು ತಡೆಹಿಡಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚೌಡಯ್ಯದಾನಪುರದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ನರಸೀಪುರದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗೂ ಅಂಬಿಗ ಸಮುದಾಯದ ಮುಖಂಡರು ವೀಕ್ಷಣೆಗೆ ಅವಕಾಶ ನೀಡದೆ ತಡೆ ಒಡ್ಡಿದ್ದಾರೆ. ಚೌಡಯ್ಯದಾನಪುರಕ್ಕೆ ಬರುವ ಮುಂಚೆ ಅಂಬಿಗ ಚೌಡಯ್ಯಪೀಠ ಇರುವ ನರಸೀಪುರಕ್ಕೆ ಸಚಿವರು ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಆಕ್ರೋಶ ತರಿಸಿತ್ತು. ಈ ಹಿನ್ನೆಲೆ ಸಚಿವರು ಮತ್ತು ಸ್ವಾಮೀಜಿಗೂ ಗ್ರಾಮಕ್ಕೆ ಬರುವ ಮುನ್ನವೇ ಗ್ರಾಮಸ್ಥರು ತಡೆದಿದ್ದಾರೆ. ಬರೋದಾದರೆ, ಸಚಿವ ಪಾಟೀಲ್ ಅವರು ಮಾತ್ರ ಬರಲಿ. ಯಾವುದೇ ಕಾರಣಕ್ಕೂ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಚೌಡಯ್ಯದಾನಪುರ ಗ್ರಾಮಕ್ಕೆ ಬರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಚಿವರ ಮತ್ತು ಅಧಿಕಾರಿಗಳ ಕಾರುಗಳಿಗೆ ಅಡ್ಡಗಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ವಿಧಿಯಿಲ್ಲದೆ ಚೌಡಯ್ಯದಾನಪುರ ಗ್ರಾಮಕ್ಕೆ ಭೇಟಿ ನೀಡದೆ ಸಚಿವ ಎಚ್.ಕೆ.ಪಾಟೀಲ್ ವಾಪಸ್ ತೆರಳಿದರು.ಇದನ್ನೂ ಓದಿ: 120 ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರು; ಅದ್ರಲ್ಲೂ ಒಬ್ಬರ ವರ್ಗಾವಣೆ, ಮುಖ್ಯ ಶಿಕ್ಷಕರಿಲ್ಲ; ಇದು ಸಿಎಂ ಪ್ರತಿನಿಧಿಸುವ ಕ್ಷೇತ್ರದ ಪರಿಸ್ಥಿತಿ!