ಬಳ್ಳಾರಿ: ಜಿಲ್ಲೆಯ ಕಂಪ್ಲಿ ಕ್ಷೇತ್ರದ ಸೋಮಸಮುದ್ರ ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಬಯಲಾಟ (ಪಾರ್ಥ ವಿಜಯ) ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಕುಣಿದು ಪ್ರೇಕ್ಷಕರನ್ನು ರಂಜಿಸಿದರು.ಬಯಲಾಟ ಉದ್ಘಾಟಿಸಿ ಕುಣಿದು ಜನರನ್ನು ಸಂತೋಷಪಡಿಸಿದ ಶ್ರೀರಾಮುಲು ಬಯಲಾಟದ ಪಾತ್ರಧಾರಿಗಳ ಜೊತೆ ಕೈಯಲ್ಲಿ ಖಡ್ಗ ಹಿಡಿದು ಹೆಜ್ಜೆ ಹಾಕಿದರು. ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಶ್ರೀರಾಮುಲು ಕುಣಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಟಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀರಾಮುಲು ಕಲಾವಿದರೊಂದಿಗೆ ಹೆಜ್ಜೆ ಹಾಕುತ್ತಾ ಕಲೆಯನ್ನು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.ಬಯಲಾಟವೆಂದರೆ?: ಕರ್ನಾಟಕ ಜಾನಪದ ಕಲೆಗಳಲ್ಲಿ ಬಯಲಾಟ ಪ್ರಮುಖ ಸ್ಥಾನದಲ್ಲಿದೆ. ಬಯಲಾಟ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದೆ. ಕರಾವಳಿ ಮಂದಿಗೆ ಯಕ್ಷಗಾನ ಹೇಗೋ, ಉತ್ತರ ಕರ್ನಾಟಕ ಮಂದಿಗೆ ಬಯಲಾಟ ಹಾಗೆ. ಊರ ಜಾತ್ರೆ, ಸಮಾರಂಭ ಕಾರ್ಯಕ್ರಮದಲ್ಲಿ ಬಯಲಾಟ ನಡೆಸಲಾಗುತ್ತದೆ. ಬಯಲಾಟದ ಪಾತ್ರಧಾರಿಗಳು ಭರ್ಜರಿ ವೇಷಭೂಷಣ ಧರಿಸಿ ಭವ್ಯ ರಂಗಮಂಟಪದಲ್ಲಿ ಉದ್ದವಾದ ಮಾತುಗಾರಿಕೆ, ಹಾಸ್ಯ, ರೋಷ, ಸಂಗೀತದ ಮೂಲಕ ಪ್ರೇಕ್ಷಕರ ಮನರಂಜಿಸುತ್ತಾರೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ತಿಂಗಳು ಬಾಕಿ; ನಿಷೇಧದ ನಡುವೆಯೂ ತಯಾರಿಸಿಟ್ಟಿದ್ದ ಪಿಒಪಿ ಮೂರ್ತಿಗಳು ವಶಕ್ಕೆ