ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್ (Renault), ಇಂದು ಭಾರತದ ಅತ್ಯಂತ ಅಗ್ಗದ 2025ರ ನವೀಕೃತ 7-ಸೀಟರ್ ರೆನಾಲ್ಟ್ ಟ್ರೈಬರ್ (Renault Triber) ಕಾರನ್ನು ಬಿಡುಗಡೆ ಮಾಡಿದೆ. ಈ ಫ್ಯಾಮಿಲಿ ಕಾರು ಈ ಬಾರಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್‌ನೊಂದಿಗೆ ಪಾದಾರ್ಪಣೆ ಮಾಡಿದೆ. ಮಸ್ಕುಲರ್ ಬಾನೆಟ್, ರಿಫ್ರೆಶ್ ಮಾಡಿದ ಬಂಪರ್, ಸಂಯೋಜಿತ LED DRL ಗಳೊಂದಿಗೆ ಹೊಸ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ LED ಫಾಗ್ ಲ್ಯಾಂಪ್‌ಗಳನ್ನು ಪಡೆದುಕೊಂಡು ಬಿಡುಗಡೆಯಾಗಿದೆ.