ಹೊಸ ಆನ್‌ಲೈನ್ ರಿಟೇಲ್ ಸ್ಟೋರ್ ಆರಂಭಿಸಿದ ಮಿನಿ ಇಂಡಿಯಾ

  • 4 years ago
ಮಿನಿ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗಾಗಿ ಹೊಸ ಆನ್‌ಲೈನ್ ರಿಟೇಲ್ ಸ್ಟೋರ್ ಅನ್ನು ಆರಂಭಿಸಿದೆ. ಕಂಪನಿಯು ಕರೋನಾ ವೈರಸ್ ಹಿನ್ನೆಲೆಯಲ್ಲಿ ಈ ಹೊಸ ಆನ್‌ಲೈನ್ ಪ್ಲಾಟ್‌ಫಾರಂ ಅನ್ನು ಆರಂಭಿಸಿದೆ.

Shop.mini.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಗ್ರಾಹಕರು ಆನ್‌ಲೈನ್ ಮೂಲಕ ಮಿನಿ ಕಾರುಗಳನ್ನು ಖರೀದಿಸಬಹುದು. ಈ ಆನ್‌ಲೈನ್ ಪ್ಲಾಟ್‌ಫಾರಂ ಸಂಪೂರ್ಣ ಮಿನಿ ಶ್ರೇಣಿಯ ಕಾರುಗಳ ಬಗೆಗಿನ ಮಾಹಿತಿಯನ್ನು ಗ್ರಾಹಕರಿಗೆ ನೀಡುತ್ತದೆ.

ಜೊತೆಗೆ ಗ್ರಾಹಕರು ಕಂಪನಿಯು ನೀಡುವ ಆಕ್ಸೆಸರಿಸ್ ಗಳ ಮೂಲಕ ತಮ್ಮಿಷ್ಟದಂತೆ ಕಾರುಗಳನ್ನು ಕಾನ್ಫಿಗರ್ ಮಾಡಿಕೊಳ್ಳಬಹುದು.