ಸೀಮಿತ ಸಂಖ್ಯೆಯ ಸೈಡ್‌ವಾಕ್ ಎಡಿಷನ್ ಕಾರು ಬಿಡುಗಡೆಗೊಳಿಸಿದ ಮಿನಿ

  • 4 years ago
ಮಿನಿ ಕಂಪನಿಯು ತನ್ನ ಕನ್ವರ್ಟಿಬಲ್ ಮಾದರಿಯ ಸೈಡ್‌ವಾಕ್ ಎಡಿಷನ್ ಎಂಬ ಹೊಸ ಸೀಮಿತ ಆವೃತ್ತಿಯ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕನ್ವರ್ಟಿಬಲ್ ಸೈಡ್‌ವಾಕ್ ಆವೃತ್ತಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.44.90 ಲಕ್ಷಗಳಾಗಿದೆ.

ಮಿನಿ ಕನ್ವರ್ಟಿಬಲ್ ಸೈಡ್‌ವಾಕ್ ಆವೃತ್ತಿಯನ್ನು ಭಾರತದಲ್ಲಿ ಸಿಬಿಯು ಮೂಲಕ ಮಾರಾಟ ಮಾಡಲಾಗುವುದು. ಭಾರತದಲ್ಲಿ ಈ ಸೀಮಿತ ಆವೃತ್ತಿಯ 15 ಯೂನಿಟ್ ಗಳನ್ನು ಮಾತ್ರ ಮಾರಾಟ ಮಾಡಲಾಗುವುದು.

ಈ ವಿಶೇಷ ಆವೃತ್ತಿಯ ಕಾರನ್ನು ಕಂಪನಿಯ ಆನ್‌ಲೈನ್ ರಿಟೇಲ್ ಪ್ಲಾಟ್ ಫಾರಂನಲ್ಲಿ ಬುಕ್ಕಿಂಗ್ ಮಾಡಬಹುದು. ಮಿನಿ ಕಂಪನಿಯು ಈ ವಿಶೇಷ ಆವೃತ್ತಿಯ ಕಾರನ್ನು ಡೀಪ್ ಲಗುನಾ ಮೆಟಾಲಿಕ್ ಎಂಬ ವಿಶೇಷ ಬಣ್ಣದಲ್ಲಿ ಮಾರಾಟ ಮಾಡಲಿದೆ.

ಮಿನಿ ಕನ್ವರ್ಟಿಬಲ್ ಸೈಡ್‌ವಾಕ್ ಕಾರು, ಸಿಗ್ನೇಚರ್ ಹೆಡ್‌ಲ್ಯಾಂಪ್‌, ಟೇಲ್ ಲ್ಯಾಂಪ್‌, ಸಾಫ್ಟ್-ಟಾಪ್ ಎಲೆಕ್ಟ್ರಿಕ್ ರೂಫ್, 17 ಇಂಚಿನ ಸಿಜರ್ ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್, ಮುಂಭಾಗದ ವ್ಹೀಲ್ ಆರ್ಕ್ ಗಳ ಹಿಂದೆ ಎರಡೂ ಬದಿಗಳಲ್ಲಿ ಸೈಡ್‌ವಾಕ್ ಎಡಿಷನ್ ಎಂಬ ಬ್ಯಾಡ್ಜಿಂಗ್ ಗಳನ್ನು ಹೊಂದಿದೆ.