ಎಂ 340 ಐ ಎಕ್ಸ್‌ಡ್ರೈವ್‌ ಕಾರಿನ ಬುಕ್ಕಿಂಗ್ ಆರಂಭಿಸಿದ ಬಿಎಂಡಬ್ಲ್ಯು ಇಂಡಿಯಾ

  • 3 years ago
ಬಿಎಂಡಬ್ಲ್ಯು ಇಂಡಿಯಾ ಇಂದಿನಿಂದ ತನ್ನ ಬಹುನಿರೀಕ್ಷಿತ ಬಿಎಂಡಬ್ಲ್ಯು ಎಂ 340 ಐ ಎಕ್ಸ್‌ಡ್ರೈವ್‌ ಕಾರಿನ ಬುಕ್ಕಿಂಗ್'ಗಳನ್ನು ಆರಂಭಿಸಿದೆ. ಸೀಮಿತ ಸಂಖ್ಯೆಯಲ್ಲಿ ಮಾರಾಟವಾಗುವ ಈ ಸ್ಪೋರ್ಟ್ಸ್ ಸೆಡಾನ್ ಕಾರ್ ಅನ್ನು ಬಿಎಂಡಬ್ಲ್ಯು ವೆಬ್ ಸೈಟ್'ನಲ್ಲಿ ಆನ್‌ಲೈನ್ ಮೂಲಕ ರೂ.1 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಬಹುದು.

ಈ ಕಾರು ಖರೀದಿಸುವ ಮೊದಲ 40 ಗ್ರಾಹಕರಿಗೆ ಭಾರತದ ಐಕಾನಿಕ್ ರೇಸ್ ಟ್ರ್ಯಾಕ್‌ನಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಬಿಎಂಡಬ್ಲ್ಯು ಎಂ 340 ಐ ಸ್ಪೋರ್ಟ್ಸ್ ಸೆಡಾನ್ ಕಾರು ಇಂಟಿಗ್ರೇಟೆಡ್ ಡಿಆರ್‌ಎಲ್‌ ಹೊಂದಿರುವ ಸ್ಲೀಕ್ ಆದ ಹೆಡ್‌ಲ್ಯಾಂಪ್‌, ಕಂಪನಿಯ ವಿಶಿಷ್ಟ ಕಿಡ್ನಿ ಶೇಪಿನ ಗ್ರಿಲ್, ಎರಡೂ ತುದಿಗಳಲ್ಲಿ ಅಗ್ರೇಸಿವ್ ಬಂಪರ್‌, ರೇರ್ ಸ್ಪಾಯ್ಲರ್ ಹಾಗೂ 18-ಇಂಚಿನ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ.

ಬಿಎಂಡಬ್ಲ್ಯು ಎಂ 340 ಐ ಎಕ್ಸ್‌ಡ್ರೈವ್‌ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Recommended