ರಿಷಬ್ ಶೆಟ್ಟಿಯವರು 'ಕಥಾ ಸಂಗಮ'ಕ್ಕಾಗಿ ಪಡೆದಿರುವ ಈ ಹೊಸ ಲುಕ್ ನಲ್ಲಿ ನೀವು ಅವರನ್ನು ಗುರುತಿಸಲು ಅಸಾಧ್ಯ !

  • 6 years ago
ಯಾವುದೇ ಒಂದು ಸಿನಿಮಾ ಆಗಲಿ ಅದಕ್ಕೆ ಪೋಸ್ಟರ್ ಬಹಳ ಮುಖ್ಯ. ಚಿತ್ರದ ಫಸ್ಟ್ ಲುಕ್ ಮೂಲಕವೇ ಪ್ರೇಕ್ಷಕರಿಗೆ ಆ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟುತ್ತದೆ. ಅದೇ ರೀತಿ ಈಗ ಕನ್ನಡದಲ್ಲಿ ರಿಲೀಸ್ ಆಗಿರುವ ಒಂದು ಚಿತ್ರದ ಲುಕ್ ಸಖತ್ ಸುದ್ದಿ ಮಾಡುತ್ತಿದೆ.ಅಂದಹಾಗೆ, ಇದು 'ಕಥಾ ಸಂಗಮ' ಚಿತ್ರದ ಫಸ್ಟ್ ಲುಕ್. ಈ ಚಿತ್ರದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಒಂದು ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಸದ್ಯ ಅವರ ಲುಕ್ ಬಿಡುಗಡೆಯಾಗಿದ್ದು, ಇದು ರಿಷಬ್ ಶೆಟ್ಟಿ ಅವರ ಅಂತ ನಂಬುವುದಕ್ಕೆ ಆಗದಿರುವ ಮಟ್ಟಿಗೆ ವಿಭಿನ್ನವಾಗಿ ಅವರನ್ನು ಇಲ್ಲಿ ತೋರಿಸಲಾಗಿದೆ. 'ಕಥಾ ಸಂಗಮ' 7 ಕಥೆಗಳ ಸಿನಿಮಾವಾಗಿದ್ದು, ಇದು ಅವುಗಳ ಪೈಕಿ ಮೊದಲ ಭಾಗವಾಗಿದೆ. ಕಿರಿಕ್ ಪಾರ್ಟಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ಈಗ ನಟನೆಗೆ ಮರಳಿದ್ದಾರೆ. ರಿಷಬ್ 'ಕಥಾ ಸಂಗಮ' ಚಿತ್ರದಲ್ಲಿ ಬಿಕ್ಷುಕನ ಪಾತ್ರ ಮಾಡುತ್ತಿದ್ದು, ಅವರ ಲುಕ್ ಈಗ ಎಲ್ಲರ ಗಮನ ಸೆಳೆದಿದೆ.

Kirik party director Rishab Shetty's new look for the movie Katha sangama has been released and people just can;t get over the look and the effort of Rishab can't be unnoticed.

Recommended