ಲೂಸ್ ಮಾದ ಯೋಗೀಶ್ - ಸಾಹಿತ್ಯ ಮದುವೆಗೆ ಕೌಂಟ್ ಡೌನ್ ಶುರು! | Filmibeat Kannada

  • 6 years ago
ಲೂಸ್ ಮಾದ ಯೋಗೀಶ್ - ಸಾಹಿತ್ಯ ಮದುವೆಗೆ ಕೌಂಟ್ ಡೌನ್ ಶುರು!

ನಟ ಲೂಸ್ ಮಾದ ಯೋಗೀಶ್ ತಮ್ಮ ಗೆಳತಿ ಸಾಹಿತ್ಯ ಜೊತೆ ಮದುವೆಯಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ಯೋಗಿ ವಿವಾಹ ಸಂಭ್ರಮಕ್ಕೆ ದಿನಗಣನೇ ಶುರುವಾಗಿದೆ. ನವೆಂಬರ್ 2ಕ್ಕೆ ಯೋಗಿ ಮತ್ತು ಸಾಹಿತ್ಯ ಹಸೆಮಣೆ ಏರಲಿದ್ದಾರೆ. ಇಷ್ಟು ದಿನ ಒಂಟಿಯಾಗಿದ್ದ ಯೋಗಿ ಬಾಳಿಗೆ ಈಗ ಸಾಹಿತ್ಯ ಎಂಟ್ರಿ ಕೊಡಲಿದ್ದಾರೆ. ಜೂನ್ 11ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ವಿವಾಹ ಮುಂದಿನ ಗುರುವಾರ ಅದ್ದೂರಿಯಾಗಿ ನಡೆಯಲಿದೆ,ಲೂಸ್ ಮಾದ ಯೋಗೀಶ್ - ಸಾಹಿತ್ಯ ಮದುವೆ ನವೆಂಬರ್ 2ಕ್ಕೆ ನಡೆಯಲಿದ್ದು, ಬೆಂಗಳೂರಿನ ಬನಶಂಕರಿಯ 8ನೇ ಹಂತದಲ್ಲಿರುವ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ.ಬೆಳಗ್ಗೆ 5 ಗಂಟೆಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಸಂಜೆ 6 ಗಂಟೆಗೆ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಬೆಂಗಳೂರಿನ ಯಡಿಯೂರಿನಲ್ಲಿರುವ ಸಾಹಿತ್ಯ ರವರ ನಿವಾಸದಲ್ಲಿ ಜೂನ್ 11 ರಂದು ನಿಶ್ಚಿತಾರ್ಥ ಸಮಾರಂಭ ಸರಳವಾಗಿ ನಡೆದಿತ್ತು.
Loose madha Yogish - sahithya Marriage Countdown Down start,.Everyone knows that Yogish is getting married. , .watch this video

Recommended