Skip to playerSkip to main contentSkip to footer
  • yesterday
ಗಂಗಾವತಿ(ಕೊಪ್ಪಳ): ಧಾರಾಕಾರವಾಗಿ ಸುರಿದ ಮಳೆಯು ಬೆಟ್ಟ-ಗುಡ್ಡಗಳ ಮೇಲಿಳಿದು, ಹಾಲ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕಿರುವ ದೃಶ್ಯ ಆನೆಗೊಂದಿಯ ಗವಿರಂಗನಾಥ ದೇಗುಲದ ಬಳಿ ಕಂಡು ಬಂತು.ಥೇಟ್​​​ ಮಲೆನಾಡಿನಲ್ಲಿರುವ ಜಲಪಾತದಂತೆ ಆನೆಗೊಂದಿ ಬಳಿಯೂ ಕೆಲಕಾಲ ಜಲಪಾತ ನಿರ್ಮಾಣವಾಗಿತ್ತು. ದಾರಿಹೋಕರು, ಪರಿಸರ ಪ್ರೇಮಿಗಳು ಕ್ಷಣಕಾಲ ನಿಂತು ಜಲಪಾತವನ್ನು ಕಣ್ತುಂಬಿಕೊಂಡರು. ಕೆಲವರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಸಂಭ್ರಮಿಸಿದರು. ಗಂಗಾವತಿಯಿಂದ ಆನೆಗೊಂದಿ ಮಾರ್ಗವಾಗಿ ಅಂಜನಾದ್ರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಅಂದರೆ ಪಂಪಾಸರೋವರದ ಸಮೀಪ ಇರುವ ಗವಿರಂಗನಾಥ ದೇಗುಲದ ಬಳಿ ಈ ದೃಶ್ಯ ವೈಭವ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆಗಾಗ್ಗೆ ಈ ಜಲಪಾತ ನಿರ್ಮಾಣವಾಗುತ್ತದೆ.ಬಂಡೆಗಳ ಮೇಲೆ ಮಳೆ ಜೋರಾಗಿ ಬಿದ್ದು ಅದು ಜಲಪಾತದಂತೆ ರಭಸವಾಗಿ ಹರಿಯುತ್ತದೆ. ಮಳೆ ಕಡಿಮೆಯಾಗುತ್ತಿದ್ದಂತೆಯೇ, ಕಣ್ಮರೆಯಾಗುವ ಜಲಪಾತ ಮತ್ತೆ ಮಳೆ ಜೋರಾಗುತಿದ್ದಂತೆ ಮತ್ತೆ ಧುಮ್ಮಿಕ್ಕಿ ಹರಿಯಲು ಆರಂಭವಾಗುತ್ತದೆ. ಈ ದೃಶ್ಯವು ಗಂಗಾವತಿ-ಹುಲಗಿ ಮಧ್ಯೆ ಸಂಚರಿಸುವ ಪ್ರಯಾಣಿಕರಲ್ಲಿ, ಅದರಲ್ಲೂ ದ್ವಿಚಕ್ರ ವಾಹನಗಳ ಸವಾರರನ್ನು ಹೆಚ್ಚು ಆಕರ್ಷಿಸುತ್ತಿದೆ. ತಮ್ಮ ಬೈಕ್‌ಗಳನ್ನು ನಿಲ್ಲಿಸಿ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.ಇದನ್ನೂ ಓದಿ: ವಿಶ್ವ ಪ್ರಸಿದ್ಧ ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಳೆಗಟ್ಟಿದ ಭೀಮನ ಅಮಾವಾಸ್ಯೆ ಸಂಭ್ರಮ

Category

🗞
News
Transcript
00:00?
00:05?
00:14?
00:19?
00:23?
00:24There's a jelly side of that.
00:46Dragon in the middle.
00:51Let's go.
00:53Mmm, that's good.
00:58I can't go over here.
01:00It's not like this.

Recommended