ಯಲ್ಲಾಪುರ (ಉತ್ತರ ಕನ್ನಡ): ಯಲ್ಲಾಪುರ ತಾಲೂಕಿನ ಅರೆಬೈಲ್ ಜಲಪಾತದಲ್ಲಿ ಸಿಲುಕಿಕೊಂಡಿದ್ದ ಮೂವರು ಪ್ರವಾಸಿಗರನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಯುವಕರ ಗುಂಪು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿರುವ ಅರೆಬೈಲ್ ಜಲಪಾತಕ್ಕೆ ಕಳೆದ ಭಾನುವಾರ ತೆರಳಿತ್ತು. ಆದರೆ ಜಲಪಾತದಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾದ ಕಾರಣ ಸಿಲುಕಿಕೊಂಡಿದ್ದರು. ಈ ಘಟನೆ ಕಳೆದ ವಾರ ನಡೆದಿದ್ದು, ವಿಡಿಯೋ ವೈರಲ್ ಆದ ನಂತರ ತಡವಾಗಿ ಬೆಳಕಿಗೆ ಬಂದಿದೆ.ಹುಬ್ಬಳ್ಳಿಯಿಂದ ಉತ್ತರಕನ್ನಡ ಪ್ರವಾಸಕ್ಕೆ ಬಂದಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿಗಳು ಅರೆಬೈಲ್ ಘಟ್ಟದ ಕಾಡಿನ ಮಧ್ಯದಲ್ಲಿರುವ ಅರೆಬೈಲ್ ಫಾಲ್ಸ್‌ಗೆ ತೆರಳಿದ್ದರು. ಜಲಪಾತದ ಸಮೀಪದ ಚಿಕ್ಕ ಹಳ್ಳವನ್ನು ದಾಟುತ್ತಿದ್ದಾಗ ದಿಢೀರ್ ನೀರಿನ ಪ್ರಮಾಣ ಹೆಚ್ಚಾದ್ದರಿಂದ ಮೂವರು ವಿದ್ಯಾರ್ಥಿಗಳು ಹಳ್ಳದ ಮಧ್ಯದಲ್ಲೇ ಸಿಲುಕಿಕೊಂಡರು.ಸಕಾಲಕ್ಕೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಯಲ್ಲಾಪುರ ಠಾಣಾ ಪೊಲೀಸರು, ನೀರಿನ ಪ್ರಮಾಣ ಸ್ವಲ್ಪ ಇಳಿಕೆಯಾಗುತ್ತಿದ್ದಂತೆ, ರಕ್ಷಣಾ ಕಾರ್ಯಾಚರಣೆ ನಡೆಸಿ ಸಿಲುಕಿಕೊಂಡಿದ್ದ ಮೂವರನ್ನು ಸುರಕ್ಷಿತವಾಗಿ ಕರೆತಂದರು.ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಭಟ್ಕಳ: ಹೆದ್ದಾರಿಯಲ್ಲಿ ಉರುಳಿದ ಬೃಹತ್ ಮರ; ಟ್ಯಾಂಕರ್, ಬೈಕ್ ಸವಾರರು ಜಸ್ಟ್ ಮಿಸ್...WATCH VIDEO