Skip to playerSkip to main contentSkip to footer
  • 2 days ago
ವಿಶಾಖಪಟ್ಟಣಂ (ಆಂಧ್ರಪ್ರದೇಶ) : ಆಂಧ್ರಪ್ರದೇಶ ಸರ್ಕಾರ ಆಯೋಜಿಸಿದ್ದ ಪ್ರತಿಷ್ಠಿತ ಯೋಗ ಆಂಧ್ರ -2025 ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಬರೆದಿದೆ. 11ನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 3.01 ಲಕ್ಷ ಜನರು ಭಾಗವಹಿಸಿದ್ದು, ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣಗೊಂಡಿದೆ.ವಿಶಾಖಪಟ್ಟಣದ ಕರಾವಳಿಯಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮವು ರಾಜ್ಯದ ಸ್ವಾಸ್ಥ್ಯ ಮತ್ತು ಸಮಗ್ರ ಆರೋಗ್ಯದ ಬದ್ಧತೆಯನ್ನು ಪ್ರದರ್ಶಿಸಿತು. ಇದನ್ನೂ ಓದಿ : ಲಂಡನ್ ಬುಕ್‌ ಆಫ್ ರೆಕಾರ್ಡ್‌ ಬರೆದ ಕಡಬದ ಬಾಲಕಿ; ಸರ್ಕಾರದ ಯೋಗ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ - YOUNG YOGA GUESTಸಾವಿರಾರು ಯೋಗ ಉತ್ಸಾಹಿಗಳು, ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ನಾಗರಿಕರು ಒಗ್ಗಟ್ಟಿನಿಂದ ಒಟ್ಟುಗೂಡಿದರು. ಸಂಘಟಿತ ಮತ್ತು ಶಿಸ್ತುಬದ್ಧ ರೀತಿಯಲ್ಲಿ ಯೋಗಾಸನಗಳನ್ನು ಪ್ರದರ್ಶಿಸಿದರು.ದಾಖಲೆ ನಿರ್ಮಿಸುವ ಈ ಕಾರ್ಯಕ್ರಮವು ಯೋಗದ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಎತ್ತಿ ತೋರಿಸಿದ್ದಲ್ಲದೇ, ಇತಿಹಾಸದಲ್ಲಿಯೇ ಅತಿದೊಡ್ಡ ಯೋಗ ಕೂಟಗಳಲ್ಲಿ ಒಂದನ್ನು ಆಯೋಜಿಸಿದ್ದಕ್ಕಾಗಿ ಆಂಧ್ರಪ್ರದೇಶವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತಾಗಿದೆ.ಇದನ್ನೂ ಓದಿ :  ಅಂತಾರಾಷ್ಟ್ರೀಯ ಯೋಗ ದಿನ: ಹೈಕೋರ್ಟ್​ ನ್ಯಾಯಮೂರ್ತಿಗಳಿಂದ ಯೋಗಾಭ್ಯಾಸ - INTERNATIONAL YOGA DAY

Category

🗞
News

Recommended