Skip to playerSkip to main contentSkip to footer
  • 5 days ago
ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿರುವುದರಿಂದ ಹಿಡಕಲ್ ಜಲಾಶಯದಿಂದ ನೀರು ಹೊರ ಬಿಡಲಾಗಿದೆ.ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಸಪ್ತ‌ ನದಿಗಳು ತುಂಬಿ ಹರಿಯುತ್ತಿವೆ. ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯದಿಂದ 6 ಕ್ರಸ್ಟ್​ ಗೇಟ್​ಗಳ ಮೂಲಕ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಸದ್ಯ 43 ಟಿಎಂಸಿ ನೀರು ಸಂಗ್ರಹ ಆಗಿರುವ ಹಿನ್ನೆಲೆಯಲ್ಲಿ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇನ್ನು ಜಲಾಶಯಕ್ಕೆ 17,692 ಕ್ಯೂಸೆಕ್ ನೀರಿ‌ನ ಒಳಹರಿವು ಇದೆ. ನೀರು ಬಿಡುತ್ತಿದ್ದಂತೆ ನೆರೆದಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಒಳಹರಿವಿನ‌ ಪ್ರಮಾಣ ನೋಡಿಕೊಂಡು ನೀರಾವರಿ ಇಲಾಖೆ ಸಿಬ್ಬಂದಿ ನೀರು ಬಿಡುಗಡೆ ಮಾಡುತ್ತಿದ್ದಾರೆ. ಅದೇ ರೀತಿ‌ ಹುಕ್ಕೇರಿ, ಗೋಕಾಕ್​, ಮೂಡಲಗಿ ಸೇರಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.ಇದನ್ನೂ ಓದಿ: ಭಾರಿ ಮಳೆ ಹಿನ್ನೆಲೆ; ಕೃಷ್ಣಾ, ತುಂಗಭದ್ರಾ ಜಲಾಶಯಗಳಿಂದ ನದಿಗೆ ನೀರು: ರಾಯಚೂರು ಜಿಲ್ಲೆಗೆ ಪ್ರವಾಹ ಭೀತಿ - FLOOD THREAT LOOMS

Category

🗞
News
Transcript
00:00I
00:02I
00:04I
00:06I
00:08I
00:10I
00:12I
00:14I
00:16I
00:18I
00:20I
00:22I
00:24I
00:26I
00:28I
00:30I
00:32I
00:34I
00:36I
00:38I
00:40I
00:42I
00:44I
00:46I
00:48I
00:50I
00:52I
00:54I
00:56I
00:58I
01:00I
01:02I
01:04I
01:06I
01:08I
01:10I
01:12I
01:14I
01:16I

Recommended