ಹೊಸ ಟಿಆರ್‌ಕೆ 502 ಎಕ್ಸ್ ಅಡ್ವೆಂಚರ್-ಟೂರರ್ ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಬೆನೆಲ್ಲಿ

  • 3 years ago
ಬೆನೆಲ್ಲಿ ತನ್ನ ಹೊಸ ಟಿಆರ್‌ಕೆ 502 ಎಕ್ಸ್ ಅಡ್ವೆಂಚರ್-ಟೂರರ್ ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬೆನೆಲ್ಲಿ ಟಿಆರ್‌ಕೆ 502 ಎಕ್ಸ್ ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.5.19 ಲಕ್ಷಗಳಾಗಿದೆ.

ಬೆನೆಲ್ಲಿ ಟಿಆರ್‌ಕೆ 502 ಎಕ್ಸ್ ಬೈಕ್ ಅನ್ನು ಬೆನೆಲ್ಲಿ ರೆಡ್, ಪ್ಯೂರ್ ವೈಟ್ ಹಾಗೂ ಮೆಟಾಲಿಕ್ ಡಾರ್ಕ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಬೆನೆಲ್ಲಿ ಟಿಆರ್‌ಕೆ 502 ಎಕ್ಸ್ ಅಡ್ವೆಂಚರ್-ಟೂರರ್ ಬೈಕಿನಲ್ಲಿ ಅಳವಡಿಸಿರುವ 499 ಸಿಸಿಯ ಟ್ವಿನ್ ಪ್ಯಾರಾಲೆಲ್ ಬಿಎಸ್ 6 ಎಂಜಿನ್ 8500 ಆರ್‌ಪಿಎಂನಲ್ಲಿ 46.8 ಬಿಹೆಚ್‌ಪಿ ಪವರ್ ಹಾಗೂ 6000 ಆರ್‌ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

ಹೊಸ ಟಿಆರ್‌ಕೆ 502 ಎಕ್ಸ್ ಅಡ್ವೆಂಚರ್-ಟೂರರ್ ಬಿಎಸ್ 6 ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Recommended