ಹೊಸ ಎಕ್ಸ್‌ಪಲ್ಸ್ 200 ಟಿ ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್ | ವಿವರಣೆ ಹಾಗೂ ಇನ್ನಿತರ ವಿವರಗಳು

  • 3 years ago
ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೊಸ ಎಕ್ಸ್‌ಪಲ್ಸ್ 200 ಟಿ ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬೈಕಿನ ಬೆಲೆ ರೂ.1.13 ಲಕ್ಷಗಳಾಗಿದೆ. ಈ ಬೈಕ್ ಬಿಎಸ್ 4 ಮಾದರಿ ಬೈಕಿಗಿಂತ ರೂ.19,000 ಹೆಚ್ಚು ಬೆಲೆಯನ್ನು ಹೊಂದಿದೆ.

ಈ ಬೈಕಿನ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದ್ದು, ಶೀಘ್ರದಲ್ಲಿಯೇ ಈ ಬೈಕ್‌ ಅನ್ನು ವಿತರಿಸಲಾಗುವುದು. ಹೊಸ ಎಕ್ಸ್‌ಪಲ್ಸ್ 200 ಟಿ ಬಿಎಸ್ 6 ಬೈಕಿನಲ್ಲಿ ಎಂಜಿನ್ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಈ ಬೈಕ್ ಸ್ಪಿರಿಕಲ್ ಎಲ್ಇಡಿ ಹೆಡ್‌ಲ್ಯಾಂಪ್‌, ಟಿಯರ್‌ಡ್ರಾಪ್ ಶೇಪಿನ ಫ್ಯೂಯಲ್ ಟ್ಯಾಂಕ್, ಸಿಂಗಲ್ ಪೀಸ್ ಸ್ಯಾಡಲ್ ಕ್ಯಾಸ್ಕೇಡಿಂಗ್, ಕಪ್ಪು ಬಣ್ಣದ ಮೆಕ್ಯಾನಿಕಲ್ ಬಿಟ್ಸ್ ಹಾಗೂ ಎಕ್ಸೆಪ್ಶನ್ ಎಕ್ಸಾಸ್ಟ್'ಗಳನ್ನು ಹೊಂದಿದೆ.

ಹೊಸ ಎಕ್ಸ್‌ಪಲ್ಸ್ 200 ಟಿ ಬಿಎಸ್ 6 ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Recommended