ಬಜಾಜ್ ಪ್ಲಾಟಿನಾ 100 ಬಿಎಸ್ 6 ಬೈಕ್ ಬಿಡುಗಡೆ

  • 4 years ago
ಬಜಾಜ್ ಆಟೋ, ಸಣ್ಣಪುಟ್ಟ ಅಪ್‌ಡೇಟ್‌ಗಳೊಂದಿಗೆ ತನ್ನ ಪ್ಲಾಟಿನಾ 100 ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಪ್ರಯಾಣಿಕ ಬೈಕ್ ಅನ್ನು ಎರಡು ಮಾದರಿಗಳಲ್ಲಿ
ಮಾರಾಟ ಮಾಡಲಾಗುತ್ತದೆ. ಈ ಬೈಕಿನ ಬೆಲೆ ದೆಹಲಿಯ ಎಕ್ಸ್‌ಶೋರೂಂ ದರದಂತೆ ರೂ.47,763ಗಳಿಂದ ಆರಂಭವಾಗುತ್ತದೆ.

ಬಿಎಸ್ 6 ಪ್ಲಾಟಿನಾ 100 ಬೈಕ್ ಅನ್ನು ಕಿಕ್-ಸ್ಟಾರ್ಟ್ ಹಾಗೂ ಎಲೆಕ್ಟ್ರಿಕ್-ಸ್ಟಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಎಲೆಕ್ಟ್ರಿಕ್-ಸ್ಟಾರ್ಟ್‌ ಬೈಕಿನ ಆರಂಭಿಕ ಬೆಲೆ ದೆಹಲಿಯ ಎಕ್ಸ್‌ಶೋರೂಂ ದರದಂತೆ
ರೂ.55,546ಗಳಾಗಿದೆ. ಈ ಬೈಕಿನಲ್ಲಿ ಹೊಸ ಎಂಜಿನ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

Recommended