Top 10 Safest Destinations For Women To Visit In The World | Boldsky Kannada

  • 4 years ago
ದಿನಾ ಬೆಳಗಾದರೆ ಸಾಕು ಅಲ್ಲಿ ಅತ್ಯಾಚಾರಗಳ ಸುದ್ಧಿಯೇ ಕಿವಿಯನ್ನು ಅಪ್ಪಳಿಸುತ್ತದೆ. ಹಸುಳೆಯ ಮೇಲೆ ಕೂಡ ಗ್ಯಾಂಗ್ ರೇಪ್ ಮಾಡುತ್ತಾರೆ. ಎಂಥ ಘೋರ! ಅನೇಕ ಅತ್ಯಾಚಾರಗಳು ನಡೆಯುತ್ತವೆ, ಕೆಲವಷ್ಟೇ ಹೊರಗೆ ತಿಳಿಯುತ್ತದೆ. ಮತ್ತೆ ಕೆಲವು ಅತ್ಯಾಚಾರಗಳು ಭಯದಿಂದ, ಮರ್ಯಾದೆಗೆ ಅಂಜಿ ಹೊರಗೆ ಬರುವುದೇ ಇಲ್ಲ. ಅದರಲ್ಲೂ ಮೊನ್ನೆ ದೆಹಲಿಯಲ್ಲಿ ನಡೆದ ಅತ್ಯಾಚಾರವಂತೂ ಇಡೀ ಭಾತರವನ್ನೇ ಬೆಚ್ಚಿ ಬೀಳಿಸಿತು. ಅದನ್ನು ನೋಡುತ್ತಾ ನಮ್ಮಮ್ಮ "ನನ್ನ ಹೆಣ್ಣು ಮಕ್ಕಳು ಹೊರಗಡೆ ಹೋದರೆ ಮನೆಗೆ ಬರುವವರೆಗೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡು ನಿಂತಂತೆ ತೋರುತ್ತದೆ" ಎಂದರು. ಇದು ಬಹಶಃ ನಮ್ಮ ಅಮ್ಮನ್ನಲ್ಲಿರುವ ಭಯ ಮಾತ್ರವಲ್ಲ, ಹೆಣ್ಣು ಮಕ್ಕಳಿರುವ ಪ್ರತೀಯೊಬ್ಬ ಪೋಷಕರ ಭಯವಾಗಿದೆ.

ಅತ್ಯಾಚಾರಿಗಳನ್ನು ಸರ್ವನಾಶ ಮಾಡಲು ಯಾವುದೇ ಮಾರ್ಗವಿಲ್ಲವೇ? ನಮ್ಮ ರಾಜಧಾನಿ ದೆಹಲಿಯಂತೂ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಳವಲ್ಲವೆಂದು ಸಾಬೀತಾಗಿ ಬಿಟ್ಟಿದೆ. ಇನ್ನು ಬೆಂಗಳೂರಿನಲ್ಲಿ ಸಾಕಷ್ಟು ಅತ್ಯಾಚಾರ ಪ್ರಕರಣಗಳು ನಡೆದಿವೆ. ಆದರೆ ದೆಹಲಿಗೆ ಹೋಲಿಸಿದರೆ ಬೆಂಗಳೂರು ಹೆಣ್ಣು ಮಕ್ಕಳಿಗೆ ಸ್ವಲ್ಪ ಮಟ್ಟಿಗಿನ ಸುರಕ್ಷಿತ ಸಿಟಿಯಾಗಿದೆ.


ಅತ್ಯಾಚಾರ ತಡೆಯಲು ಹೆಣ್ಣು ಮಕ್ಕಳು ಮೈತುಂಬಾ ಬಟ್ಟೆ ಹಾಕಬೇಕೆಂದು ಹೇಳುತ್ತಾರೆ, ಮೈ ತುಂಬಾ ಬಟ್ಟೆ ಹಾಕಿದ್ದ ಎಷ್ಟೋ ಹೆಣ್ಣು ಮಕ್ಕಳ ಮೆಲೆ ಅತ್ಯಾಚಾರ ನಡೆದಿಲ್ಲವೇ? 6 ತಿಂಗಳ ಮಗು ಸೆಕ್ಸಿಯಾಗಿ ಕಾಣುವುದೇ? ಅತ್ಯಾಚಾರಕ್ಕೆ ಕಾರಣ ವಿಕೃತ ಮನಸ್ಸು. ಮುಖ್ಯವಾಗಿ ಅತ್ಯಾಚಾರಿಗಳಿಗೆ ಕಾನೂನಿನ ಭಯವಿಲ್ಲ, ಜೈಲಿಗೆ ಹೋದರೆ ಕೆಲವೇ ದಿನಗಳಲ್ಲಿ ಹಿಂತಿರುಗಿ ಬರಬಹುದಲ್ಲವೇ?

ಇಲ್ಲಿ ನಾನು ಹೆಣ್ಣು ಸುರಕ್ಷಿತವಾಗಿರುವ ಕೆಲವೊಂದು ಸ್ಥಳಗಳ ಬಗ್ಗೆ ಹೇಳಿದ್ದೇನೆ. ಇಲ್ಲಿ ಹೆಣ್ಣು ಮಕ್ಕಳು ತಮಗೆ ಇಷ್ಟ ಬಂದ ಡ್ರೆಸ್ ಹಾಕುತ್ತಾರೆ. ಸ್ವತಂತ್ರವಾಗಿ ಓಡಾಡುತ್ತಾರೆ, ಆದರೆ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆ. ಬನ್ನಿ ಆ ಸ್ಥಳಗಳಾವುವು ಎಂದು ನೋಡೋಣ ಬನ್ನಿ.

Recommended