Skip to playerSkip to main contentSkip to footer
  • 3/2/2020
ಕ್ಯಾನ್ಸರ್ ಎಂಬ ಮಾರಕ ಈ ಹಿಂದೆ ಅಪರೂಪದ ಕಾಯಿಲೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನೋಡಿದರೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಾತಾವರಣದಲ್ಲಿ ಹಾಗೂ ನಮ್ಮ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳು. 2014ರ ಅಂಕಿ ಅಂಶ ನೋಡಿದಾಗ ವಿಶ್ವದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ 14.5 ಮಿಲಿಯನ್ ಇತ್ತು. 2024 ಆಗುವಷ್ಟರಲ್ಲಿ ಈ ಸಂಖ್ಯೆ ಸುಮಾರು 19 ಮಿಲಿಯನ್ ತಲುಪಲಿದೆ ಎಂದು ಅಂದಾಜಿಸಲಿದೆ, ಇನ್ನೂ ಎರಡು ದಶಕಗಳಲ್ಲಿ ಈ ಸಂಖ್ಯೆ 22 ಮಿಲಿಯನ್ ಆಗುವ ಸಾಧ್ಯತೆ ಇದೆ. ವಿಶ್ವದಲ್ಲಿ ಕಾಯಿಲೆಯಿಂದ ಸಾವನ್ನಪ್ಪುವರ ಸಂಖ್ಯೆಯಲ್ಲಿ ಕ್ಯಾನ್ಸರ್‌ನಿಂದ ಸಾವನ್ನಪ್ಪುವವರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಅದರಲ್ಲಿ ಮೂರನೇಯ ಒಂದು ಭಾಗದಷ್ಟು ಜನರಿಗೆ ಅಹಾರಕ್ರಮ, ಮೈ ತೂಕ, ಕಡಿಮೆ ಹಣ್ಣು, ತರಕಾರಿಗಳನ್ನು ತಿನ್ನುವುದರಿಂದ, ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯಿಂದ ಬಂದಿರುತ್ತದೆ. ಇಲ್ಲಿ ನಾವು ಯಾವೆಲ್ಲಾ ಅಭ್ಯಾಸದಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಹೇಳಿದ್ದೇವೆ ನೋಡಿ.

Recommended