ಕೊಡವರ ನಾಡಲ್ಲಿ ಸಂಭ್ರಮವಿಲ್ಲ | Oneindia Kannada

  • 6 years ago
ಇಂದು ಕೊಡಗು, ಕೊಡಗಾಗಿ ಉಳಿದಿಲ್ಲ. ಅಕ್ಷರಶಃ ಅಲ್ಲಿ ಸ್ಮಶಾನ ಮೌನ ಆವರಿಸಿದೆ. ಕೊಡವರು ಬೆಳೆದು, ಆಡಿ ನಲಿದ ಮನೆಗಳು ಧರಾಶಾಹಿಯಾಗಿವೆ. ಪರಂಪರೆಯನ್ನು ಬಿಂಬಿಸುವ ಐನ್ ಮನೆಗಳು ನೆಲಕಚ್ಚಿವೆ. ಅಲ್ಲಿದ್ದ ಪುರಾತನ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇವೆಲ್ಲದರ ಜೊತೆಗೆ ಕೊಡಗಿನ ಕನಸೇ ಕಮರಿದಂತಾಗಿದೆ.ಇದಿಷ್ಟೇ ಅಲ್ಲ. ಇದುವರೆಗೂ ಕಂಡು ಕೇಳರಿಯದ ಈ ಭೀಕರ ಪ್ರವಾಹ ಆಚರಣೆಗಳ ಮೇಲೂ ಕರಿ ಛಾಯೆ ಮೂಡಿಸಿದೆ. ಯಾರಲ್ಲೂ ಉತ್ಸಾಹವಿಲ್ಲ. ನಿಗಧಿಯಾಗಿದ್ದ ಮಧುವೆಗಳಲ್ಲೂ ಸಂಭ್ರಮವಿಲ್ಲ. ಅದೆಷ್ಟೋ ಮದುವೆಗಳು ಮುಂದೂಡಿಕೆಯಾಗಿವೆ. ಇದಕ್ಕೆಲ್ಲ ಕಾರಣ ಭಾದಿಸಿದ ರಕ್ಕಸ ಜಲಪ್ರಳಯ. ಇನ್ನು ಕೃಷಿಯ ಜೊತೆ ಜೊತೆಗೆ ಆಚರಣೆಯಲ್ಲಿ ಬಂದಿದ್ದ ಕೊಡಗಿನ ಸಾಂಸ್ಕೃತಿಕ ಪ್ರತೀಕವೇ ಆಗಿದ್ದ ಕೈಲ್ ಮಹೂರ್ತ ಹಬ್ಬ ಪ್ರತಿ ಸೆಪ್ಟೆಂಬರ್ ೩ ರಂದು ಆಚರಿಸಲ್ಪಡುತ್ತಿತ್ತು. ಕೈಲ್ ಮಹೂರ್ತ ಎಂದರೆ ಅಲ್ಲಿ ಸಾಂಪ್ರದಾಯಿಕ ನೃತ್ಯಗಳು ಮೇಳೈಸುತ್ತಿದ್ದವು. ಈ ಸಂದರ್ಭ ಪ್ರಕೃತಿಯ ಮಡಿಲಿನಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಸೊಗಡನ್ನು ನೋಡುವುದೇ ಕಣ್ಣಿಗೆ ಹಬ್ಬವೆಂಬಂತೆ ಇತ್ತು. ಆದರೆ ಈಗ ಎಲ್ಲೂ ಆ ಉತ್ಸಾಹವಿಲ್ಲ. ಕೈಲ್ ಮಹೂರ್ತದ ಸಂಭ್ರಮದಲ್ಲಿ ಮುಳುಗಿರುತ್ತಿದ್ದ ಮುಕ್ಕೋಡ್ಲು, ಕಾಲೂರು, ಮಕ್ಕಂದೂರು ,ಹಟ್ಟಿಹೊಳೆ ಗ್ರಾಮಗಳು ಈಗ ನೆನಪು ಮಾತ್ರ.

Recommended