24-30 % ವೇತನ ಹೆಚ್ಚಳ: ಸರ್ಕಾರಿ ನೌಕರರಿಗೆ ಸಿದ್ದು ಉಡುಗೊರೆ | Oneindia Kannada

  • 6 years ago
ಈ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ನೀಡುತ್ತಿದ್ದಾರಾ?

ಫೆಬ್ರವರಿ ತಿಂಗಳಿನಿಂದ ಸರ್ಕಾರಿ ನೌಕರರ ವೇತನದಲ್ಲಿ ಶೇ.24-30 ಪ್ರತಿಶತ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆ.15 ರಂದು ಘೋಷಿಸಲಿರುವ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇತನ ಹೆಚ್ಚಳದ ಸಿಹಿ ಸುದ್ದಿಯನ್ನು ಘೋಷಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

6.2 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮತ್ತು ಪಿಂಚಣಿದಾರರಿಗೂ ಸೌಲಭ್ಯ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅಷ್ಟೇ ಅಲ್ಲದೇ, ಬ್ಯಾಂಕ್ ಗಳಂತೆ ಆಲ್ಟರನೇಟಿವ್ ಶನಿವಾರದಂದು ಸಹ ಸರ್ಕಾರಿ ನೌಕರರಿಗೆ ರಜೆ ಸಿಗುವ ಸಾಧ್ಯತೆ ಇದೆ.

ಸರ್ಕಾರಿ ನೌಕರರ ಸಂಘಟನೆಯ ಬೇಡಿಕೆಯ ಮೇರೆಗೆ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿಯೊಂದನ್ನು ನೇಮಿಸಿರುವ ಸಿದ್ದರಾಮಯ್ಯ, ವೇತನ ಹೆಚ್ಚಳ ಮತ್ತು ಪಿಂಚಣಿಗೆ ಸಂಬಂಧಸಿದಂತೆ ಶಿಫಾರಸ್ಸು ನೀಡಲು ತಿಳಿಸಿದ್ದು, ಇದಕ್ಕೆ ಜ.31 ರವರೆಗೆ ಕಾಲಾವಕಾಶ ನೀಡೀದ್ದಾರೆ.
Karnataka state government led by Siddaramaiah is likely to announce a 24-30% pay hike for its 6.2 lakh employees and pensioners in the budget, which will be pronounced on Feb 15th.

Recommended