ಅರವಿಂದ್ ಕೇಜ್ರಿವಾಲ್ ಗೆ ಟೈಮೇ ಸರಿಯಿದ್ದಂತಿಲ್ಲ | Oneindia Kannada
  • 6 years ago
ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಸಮಯದಲ್ಲಿ ದೆಹಲಿ ಸರ್ಕಾರಕ್ಕೆ ನವೆಂಬರ್ ಛಳಿ ಯ 'ಬಿಸಿ' ತಗುಲುತ್ತಿದೆ. ನಗರದ ವಾಯುಮಾಲಿನ್ಯ ನಿಯಂತ್ರಣಕ್ಕೆ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಯೋಜಿತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ವಿರೋಧ ಪಕ್ಷಗಳು ಸರ್ಕಾರವನ್ನು ಚುಚ್ಚುತ್ತಿವೆ. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಯಾವ ಹೆಜ್ಜೆ ಇಟ್ಟರೂ ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇದೆ. ವಾಯುಮಾಲಿನ್ಯ ನಿಯಂತ್ರಣಕ್ಕೆಂದು ಸಮ-ಬೆಸೆ ಸಂಖ್ಯೆ ಸಂಚಾರ ವ್ಯವಸ್ಥೆಯನ್ನು ಇದೇ ತಿಂಗಳ 13 ರಿಂದ ಐದು ದಿನಗಳ ಕಾಲ ಜಾರಿಯಾಗುವಂತೆ ದೆಹಲಿ ಸರ್ಕಾರ ನೀಡಿದ್ದ ಆದೇಶಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಡ್ಡಗಾಲು ಹಾಕಿದ್ದಲ್ಲದೆ. ದೆಹಲಿ ಸರ್ಕಾರದ ಮಾಲಿನ್ಯ ನಿಯಂತ್ರಣ ಯೋಜನೆಗಳನ್ನು ದೂರದೃಷ್ಠಿ ಇಲ್ಲದವು ಎಂದು ಹೀಗಳೆದಿದೆ.ಕಲುಷಿತ ಗಾಳಿಯಿಂದ ರಕ್ಷಿಸಿಕೊಳ್ಳಿ ಹಾಗೂ ಕಲುಷಿತ ಸರ್ಕಾರವನ್ನು ದೂರ ತಳ್ಳಿ ಎಂಬ ಘೊಷವಾಕ್ಯವನ್ನು ಬಿ.ಜೆ.ಪಿ ಬಳಸುತ್ತಿದೆ.

Nothing is going right for Arvind kejriwal. Whatever he is trying to stop pollution in Delhi is back firing him .
Recommended