Skip to playerSkip to main contentSkip to footer
  • 7/5/2025
ಕಲಬುರಗಿ: ಜೇವರ್ಗಿ ಪಟ್ಟಣದ ಬಿಜಾಪುರ ರಸ್ತೆಯ ಬಸವೇಶ್ವರ ವೃತ್ತದ ಬಳಿ ಇಂದು ನಸುಕಿನ ಜಾವ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ಹಲವಾರು ಅಂಗಡಿಗಳು ಸುಟ್ಟು ಭಸ್ಮವಾಗಿವೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ, ಓಂ ಕೇಕ್ ಕಾರ್ನರ್, ಬಸವ ಶ್ರೀ ಮಕ್ಕಳ ಆಸ್ಪತ್ರೆ ಮತ್ತು ಮೆಡಿಕಲ್, ಹಿರೇಮಠ ಮೊಬೈಲ್ ಶಾಪ್ ಹಾಗೂ ಟೀ ಪಾಯಿಂಟ್‌ ಸುಟ್ಟು ಕಲಕಲಾಗಿವೆ. ಅಂದಾಜು 25 ರಿಂದ 30 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.ದಾವಣಗೆರೆ ಶಾರ್ಟ್​ ಸರ್ಕ್ಯೂಟ್​: ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಾಯಿ ಹಾಗೂ ಮಗ ಮೃತಪಟ್ಟ ಘಟನೆ ಇತ್ತೀಚೆಗೆ ದಾವಣಗೆರೆ ನಗರದ ಕಾಯಿಪೇಟೆಯಲ್ಲಿ ನಡೆದಿತ್ತು. ಅವಘಡದಲ್ಲಿ ಮನೆಯಲ್ಲಿದ್ದ ವಸ್ತುಗಳು ಕೂಡ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.ಮಲಗಿದ್ದ ವೇಳೆ ತಡರಾತ್ರಿ ಮನೆಯಲ್ಲಿ ಬೆಖಿ ಹೊತ್ತಿಕೊಂಡಿತ್ತು. ಮನೆ ತುಂಬಾ ದಟ್ಟ ಹೊಗೆ ಆವರಿಸಿದ್ದು, ಮನೆಯಲ್ಲಿ 6 ಮಂದಿಯಲ್ಲಿ ನಾಲ್ವರು ಹೊರಗೆ ಓಡಿದ್ದರು. ವಿಮಲಾ ಹಾಗೂ ಕುಮಾರ್​ ಅವರು ಹೊರಬರಲಾಗದೇ, ಹೊಗೆಯಿಂದಾಗಿ ಉಸಿರುಗಟ್ಟಿ ಇಬ್ಬರೂ ಅಸ್ವಸ್ಥರಾಗಿಕೊಣೆಯಲ್ಲಿ ಬಿದ್ದಿದ್ದರು. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರವಾಗಿ ಅಸ್ವಸ್ಥರಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಇಬ್ಬರೂ ಸಾವನ್ನಪ್ಪಿದ್ದರು.ಇದನ್ನೂ ಓದಿ: ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​​ನಿಂದ ಮನೆಗೆ ಬೆಂಕಿ: ಮಲಗಿದ್ದಾಗ ತಾಯಿ - ಮಗ ಉಸಿರುಗಟ್ಟಿ ಸಾವು

Category

🗞
News
Transcript
00:00This video is brought to you by the National Anthem of the National Anthem of the National Anthem of the National Anthem of the National Anthem.
00:30This video is brought to you by the National Anthem of the National Anthem of the National Anthem.
01:00This video is brought to you by the National Anthem of the National Anthem of the National Anthem of the National Anthem of the National Anthem.

Recommended