ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಆಯ್ಕೆ ಕುರಿತು ಕಿಚ್ಚ ಸುದೀಪ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ವಿವಾದಿತ ವ್ಯಕ್ತಿಗಳನ್ನು ಕರೆಯಬೇಡಿ ಎಂದು ನಾನು ಹೇಳುವುದಿಲ್ಲ, ಆದರೆ ಅವರನ್ನು ಯಾಕೆ ಮತ್ತು ಏನಕ್ಕೆ ಕಳುಹಿಸಲಾಗುತ್ತಿದೆ ಎಂಬ ಬಗ್ಗೆ ತಂಡಕ್ಕೆ ಸ್ಪಷ್ಟತೆ ಇರಬೇಕು," ಎಂದು ಅವರು ಪ್ರತಿಪಾದಿಸಿದ್ದಾರೆ. ಮನೆಯಲ್ಲಿ "ಬುದ್ಧಿವಂತರು" ಮತ್ತು "ಅತಿ ಬುದ್ಧಿವಂತರು" ಇರುತ್ತಾರೆ; ಕೆಲವೊಮ್ಮೆ ಅತಿ ಬುದ್ಧಿವಂತರನ್ನು ನಿಯಂತ್ರಿಸುವುದೇ ವಾರಾಂತ್ಯದ ಕಥೆಯಾದರೆ, ಇತರೆ ಅರ್ಹ ಸ್ಪರ್ಧಿಗಳಿಗೆ ಅನ್ಯಾಯವಾಗುತ್ತದೆ. ಇದು ತಮಗೆ ವೈಯಕ್ತಿಕವಾಗಿ ಒತ್ತಡ ತರುತ್ತದೆ. ಸ್ಪರ್ಧಿಗಳ ಆಯ್ಕೆ ಕುರಿತು ತಾನು ಯಾವುದೇ ಷರತ್ತು ವಿಧಿಸಿಲ್ಲ, ಬದಲಿಗೆ ಇದು ಶೋನ ಗುಣಮಟ್ಟವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ತಂಡದೊಂದಿಗಿನ ಚರ್ಚೆ ಮಾತ್ರ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಕಿಚ್ಚ ಸುದೀಪ್ ಕೊನೆಗೂ ಬಿಗ್ ಬಾಸ್ ಕನ್ನಡ ಸೀಸನ್ 12 ರನ್ನು ನಿರೂಪಿಸಲು ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ಅಧಿಕೃತವಾಗಿ ಪತ್ರಿಕಾಗೋಷ್ಠಿ .ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ತಂಡ ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates