ಜೈಲರ್-2 ರಜಿನಿಕಾಂತ್ ನಟನೆಯ ಮೋಸ್ಟ್ ಅವೇಟೆಡ್ ಸಿನಿಮಾ.. ಸದ್ಯ ಜೈಲರ್ ಮೂವಿ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಆದರೆ ಹೀಗೆ ಎಂಟ್ರಿ ಕೊಟ್ಟಿರೋ ಜೈಲರ್ ಸಿನಿಮಾ ತಂಡ 43 ವರ್ಷಗಳ ಹಿಂದಿನ ರಾಜಣ್ಣ ಅವರ ಕಥೆ ನೆನಪು ಮಾಡ್ಸಿದೆ. ಅಷ್ಟೇ ಅಲ್ಲಾ ತಲೈವಾ ಎಂಟ್ರಿ ಆಗಿದೆ ಅಂತ ಅಭಿಮಾನಿಗಳು ರಜಿನಿ ಇದ್ದ ಜಾಗಕ್ಕೆ ಓಡೋಡಿ ಬಂದಿದ್ದಾರೆ.. ಅಲ್ಲಿ ರಜಿನಿ ಮೇನಿಯಾನೇ ನಡೀತಾ ಇದೆ.