News Cafe | ಚಿಕ್ಕಬಳ್ಳಾಪುರ-ಬೆಂಗಳೂರು ಮಾರ್ಗ ರೈಲು ದರ ದುಪ್ಪಟ್ಟು | June 12, 2022

  • 2 years ago
ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಬಸ್ ಪ್ರಯಾಣ ದರಕ್ಕಿಂತ ಈಗ ರೈಲು ಪ್ರಯಾಣದ ದರವೇ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ-ಬೆಂಗಳೂರು ಮಾರ್ಗದಲ್ಲಿ ಪ್ರತಿನಿತ್ಯ ಎರಡು ರೈಲುಗಳು ಸಂಚಾರ ಮಾಡಲಿವೆ. ಬೆಳಿಗ್ಗೆ 8 ಗಂಟೆಗೆ ಕೋಲಾರದಿಂದ ಚಿಕ್ಕಬಳ್ಳಾಪುರ ಮಾರ್ಗದ ಮೂಲಕ ಬೆಂಗಳೂರು ತಲುಪಲಿರುವ ಡೆಮು ಎಕ್ಸ್ ಪ್ರೆಸ್ ರೈಲು ಮರಳಿ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ವಾಪಾಸ್ಸಾಗಲಿದೆ. ಆದ್ರೆ ಈ ಡೆಮು ಎಕ್ಸ್ಪ್ರೆಸ್ ರೈಲಿನಲ್ಲಿ ಜೂನ್ 1 ರಿಂದ ಟಿಕೆಟ್ ದರ ಮೂರು ಪಟ್ಟು ಹೆಚ್ಚಿಸಿದ್ದಾರೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ 15 ರೂಪಾಯಿ ಇದ್ದ ದರ ಈಗ ಏಕಾಏಕಿ 40 ರೂಪಾಯಿ ಮಾಡಲಾಗಿದೆ. ಚಿಕ್ಕಬಳ್ಳಾಪುರದಿಂದ ಬಂಗಾರಪೇಟೆಗೆ 25 ರೂಪಾಯಿ ಇದ್ದ ದರ ಈಗ 45 ರೂಪಾಯಿ ಆಗಿದೆ. ಪ್ರತಿಯೊಂದು ಸ್ಟಾಪ್‍ಗೂ ಇಂತಿಷ್ಟು ಹಣ ಅಂತ ದರ ಹೆಚ್ಚಳ ಮಾಡಿದ್ದು ಇದೊಂದು ಅವೈಜ್ಞಾನಿಕ ದರ ನಿಗದಿ ಅಂತ ರೈಲು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಪಟ್ಟಣಕ್ಕೆ 20 ಕಿಲೋಮೀಟರ್ ದೂರವಿದ್ದು ಬಸ್ ನಲ್ಲೇ 20 ರೂಪಾಯಿ ಇದ್ರೇ ರೈಲಿನಲ್ಲಿ 30 ರೂಪಾಯಿ ಇದೆ. ಇತ್ತ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿಗೂ ಸಹ ಬಸ್ಸಿನಲ್ಲಿ 25 ರೂಪಾಯಿ ಇದ್ರೇ ರೈಲಿನಲ್ಲಿ 30 ರೂಪಾಯಿ ದರವಿದೆ..ಹೀಗಾಗಿ ಇದೊಂದು ಅವೈಜ್ಞಾನಿಕ ದರ ಅಂತ ಪ್ರಯಾಣಿಕರು ಕಿಡಿಕಾರಿದ್ದಾರೆ.

#publictv #newscafe #chikkaballapur