ಹೊಸ ಎಂಟಿ -09 ಬೈಕ್ ಅನಾವರಣಗೊಳಿಸಿದ ಯಮಹಾ

  • 4 years ago
ಖ್ಯಾತ ಬೈಕ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾದ ಯಮಹಾ 2021ರಲ್ಲಿ ಹೊಸ ಯಮಹಾ ಎಂಟಿ -09 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಮಾರುಕಟ್ಟೆಯಲ್ಲಿರುವ ಬೈಕಿಗಿಂತ ಸುಮಾರು 8 ಪೌಂಡ್ ಹಗುರವಾಗಿರುವ ಈ ಬೈಕ್ ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಸೈಬೋರ್ಗ್‌ನಂತೆ ಕಾಣುತ್ತದೆ.

ಇವಾಟಾ ಕಾರ್ಖಾನೆಯ ಜನಪ್ರಿಯ ಹೈಪರ್ ನೇಕೆಡ್ ಬೈಕಿನಲ್ಲಿ ಅಪ್ ಡೇಟ್ ಮಾಡಲಾದ ಎಂಜಿನ್, ಚಾಸಿಸ್, ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಜೊತೆಗೆ 6-ಆಕ್ಸಿಸ್ ಐಎಂಯು, ರಿವರ್ಕ್ಡ್ ಸ್ಟೈಲಿಂಗ್ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ.

ಯಮಹಾ ಕಂಪನಿಯು ಈ ಬೈಕಿಗೆ ಮಾರುಕಟ್ಟೆಯಲ್ಲಿರುವ ಬೈಕಿಗಿಂತ 400 ಡಾಲರ್ ಹೆಚ್ಚು ಅಂದರೆ 9,399 ಡಾಲರ್ ಬೆಲೆಯನ್ನು ನಿಗದಿಪಡಿಸಿದೆ.

Recommended