ಮಹೀಂದ್ರಾ ಬೊಲೆರೊ ಸಿಟಿ ಪಿಕ್-ಅಪ್ ಬಿಡುಗಡೆ | ಬೊಲೆರೊ ಸಿಟಿ ಪಿಕ್-ಅಪ್ ಬೆಲೆ, ವಿನ್ಯಾಸ, ವೈಶಿಷ್ಟ್ಯತೆ ಮತ್ತು ತಾಂತ್ರಿಕ ಮಾಹಿತಿ

  • 5 years ago
ಪ್ರಯಾಣಿಕ ಕಾರುಗಳ ಜೊತೆ ವಾಣಿಜ್ಯ ಬಳಕೆಯ ವಾಹನಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಬೊಲೆರೊ ಪಿಕ್-ಅಪ್ ಟ್ರಕ್ ಮಾದರಿಯಲ್ಲಿ ಹೊಸದಾಗಿ ಸಿಟಿ ಪಿಕ್-ಅಪ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಹೊಸದಾಗಿ ಬಿಡುಗಡೆಯಾಗಿರುವ ಬೊಲೆರೊ ಸಿಟಿ ಪಿಕ್-ಅಪ್ ಮಾದರಿಯು ಹೊಸ ವಿನ್ಯಾಸದೊಂದಿಗೆ ನಗರ ಪ್ರದೇಶದಲ್ಲಿ ಓಡಾಟಕ್ಕೆ ಅನುಕೂಲಕವಾಗುವಂತಹ ವೈಶಿಷ್ಟ್ಯತೆ ಹೊಂದಿದ್ದು, ಹೊಸ ವಾಹನದ ಬೆಲೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.25 ಲಕ್ಷ ನಿಗದಿ ಮಾಡಲಾಗಿದೆ.

ಸರಕು ಸಾಗಾಣಿಕೆಗಾಗಿ ಈ ಬಾರಿ ವಿಶೇಷವಾಗಿ ಸಿದ್ದಗೊಂಡಿರುವ ಮಹೀಂದ್ರಾ ಬೊಲೆರೊ ಸಿಟಿ ಪಿಕ್-ಅಪ್ 3.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹೊಸ ವಾಹನವು 63-ಬಿಎಚ್‌ಪಿ ಮತ್ತು 195-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.