ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಸರ್ಕಾರದ ವಾದವೇನು? | Oneindia Kannada

  • 4 years ago
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಂ ಧರ್ಮೇತರ ನಿರಾಶ್ರಿತರಿಗೆ ದೇಶದ ಪೌರತ್ವ ನೀಡುವ 'ಪೌರತ್ವ (ತಿದ್ದುಪಡಿ) ಮಸೂದೆ 2019'ಕ್ಕೆ ಲೋಕಸಭೆಯಲ್ಲಿ ಸೋಮವಾರ ಅನುಮೋದನೆ ಸಿಕ್ಕಿದೆ. ಭಾರತದಲ್ಲಿ ದಾಖಲೆ ಇಲ್ಲದೆ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್‌, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್‌ ವಲಸಿಗರನ್ನು ಗುರಿಯಾಗಿಸಿಕೊಂಡು ‘ಅಕ್ರಮ ವಲಸಿಗರು’ ವ್ಯಾಖ್ಯಾನಕ್ಕೆ ತಿದ್ದುಪಡಿ ಮಾಡುವುದೇ ಈ ಮಸೂದೆಯ ಉದ್ದೇಶ. ಈ ಮಸೂದೆಯು ಇವರಿಗೆಲ್ಲ ಶೀಘ್ರವಾಗಿ ಅಂದರೆ ಆರು ವರ್ಷಗಳಲ್ಲಿ ಭಾರತದ ಪೌರತ್ವ ನೀಡಲಿದೆ. ಈ ಹಿಂದೆ ಭಾರತದ ಪ್ರಜೆಯಾಗಲು ಕನಿಷ್ಠ 12 ವರ್ಷ ದೇಶದಲ್ಲಿ ನೆಲೆಸುವುದು ಅಗತ್ಯವಾಗಿತ್ತು.
he Citizenship (Amendment) Bill 2019, that seeks to give Indian nationality to non-Muslim refugees from Pakistan, Bangladesh and Afghanistan passed the lower House test yesterday. The Bill seeks to amend the definition of illegal immigrant for Hindu, Sikh, Parsi, Buddhist and Christian immigrants from Pakistan, Afghanistan and Bangladesh, who have lived in India without documentation.

Recommended