ಅಮಿತ್ ಶಾ ಪದೇ ಪದೇ ಬೆಂಗಳೂರಿಗೆ ಬರುತ್ತಿರುವ ಕಾರಣ ಬಯಲು ಮಾಡಿದ ಜಿ ಪರಮೇಶ್ವರ್ | Oneindia Kannada

  • 6 years ago
Due to election defeat panic to BJP, party national president Amit Shah frequently visiting to Karnataka, alleges KPCC president Dr G Parameshwara in Kalaburagi.


ರಾಜ್ಯದಲ್ಲಿ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಆದ್ದರಿಂದಲೇ ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪದೇ ಪದೇ ಇಲ್ಲಿಗೆ ಬರುತ್ತಿದ್ದಾರೆ. ಅವರು ಇಲ್ಲಿಗೆ ಬರೋದು ಹಾಗೂ ಹೋಗೋದು ಬಿಜೆಪಿಗೆ ಬಿಟ್ಟ ವಿಚಾರ. ಇದರಿಂದ ನಮಗೇನೂ ವ್ಯತ್ಯಾಸ ಆಗೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಇಲ್ಲಿ ಹೇಳಿದ್ದಾರೆ. ಕೋಮುವಾದದ ಟ್ರಂಪ್ ಕಾರ್ಡ್ ಹಿಡಿದು ಬಿಜೆಪಿ ಚುನಾವಣೆಗೆ ಹೋಗುತ್ತದೆ. ಆ ಪಕ್ಷದಿಂದಲೇ ರಾಜ್ಯದಲ್ಲಿ ಕೋಮುವಾದ ಹೆಚ್ಚುತ್ತಿದೆ. ಮಂಗಳೂರು ಗಲಭೆ ಕೂಡ ಆ ಪಕ್ಷದ ಸೃಷ್ಟಿ. ಅಮಿತ್ ಶಾ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಇನ್ನು ಮಹಾದಾಯಿ ವಿಚಾರದಲ್ಲಿ ಅವರು ಡಬಲ್ ಗೇಮ್ ಆಡ್ತಿದ್ದಾರೆ ಎಂದು ಅವರು ಆರೋಪಿಸಿದರು.ಮಹಾದಾಯಿ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಾರೆ. ನೀರು ಬಿಡ್ತಿವಿ ಅಂತ ಗೋವಾ ಸಿಎಂ‌ ಪರಿಕ್ಕರ್ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಹೇಳ್ತಾರೆ. ಆದರೆ ಬೆಳಗಾಗೋದ್ರಲ್ಲಿ ಮತ್ತೆ ನೀರು ಬಿಡೋಕೆ ಆಗಲ್ಲ ಅಂತಾರೆ. ನೀರು ಬಿಡುವುದು ಹೌದಾದರೆ ಅದೇ ಮಾತು ಸಿದ್ದರಾಮಯ್ಯ ಅವರಿಗೆ ಹೇಳಬೇಕು. ಗೋವಾ ಮುಖ್ಯಮಂತ್ರಿಗಳು ಯಡಿಯೂರಪ್ಪಗೆ ಏಕೆ ಹೇಳ್ತಾರೆ ಎಂದು ಪ್ರಶ್ನಿಸಿದರು.

Recommended