ಸಮೀರ್ ಆಚಾರ್ಯಗೆ ವಾರ್ನಿಂಗ್ ಕೊಟ್ಟ ಸುದೀಪ್ | Filmibeat Kannada

  • 6 years ago
Bigg Boss Kannada 5: Week 11: Sameeracharya should maintain secret about his stay in secret room, warns Kichcha Sudeep.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರ ಎಲಿಮಿನೇಟ್ ಆಗಲು ಸಮೀರಾಚಾರ್ಯ ನಾಮಿನೇಟ್ ಆಗಿದ್ದರು. ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂತ ತಿಳಿಸದೆ, ಮಧ್ಯರಾತ್ರಿ ದಿಢೀರ್ ಅಂತ 'ಎಲಿಮಿನೇಷನ್ ಪ್ರಕ್ರಿಯೆ'ಗೆ ಚಾಲನೆ ಕೊಟ್ಟ 'ಬಿಗ್ ಬಾಸ್', ಸಮೀರಾಚಾರ್ಯ ಅವರನ್ನ ಹೊರಗೆ ಕರೆದರು.ಇದ್ದಕ್ಕಿದ್ದಂತೆಯೇ ನಾಪತ್ತೆ ಆಗಿದ್ದ ಜಯಶ್ರೀನಿವಾಸನ್ ಜೊತೆಗೆ ಸಮೀರಾಚಾರ್ಯ ಕೂಡ ಸೀಕ್ರೆಟ್ ರೂಮ್ ನಲ್ಲಿ ಇರಬಹುದು ಎಂಬ ಊಹೆ ಹಲವು ಸ್ಪರ್ಧಿಗಳಲ್ಲಿ ಇತ್ತು.ಸ್ಪರ್ಧಿಗಳ ಊಹೆಯಂತೆ 'ಬಿಗ್ ಬಾಸ್' ಮನೆಯಿಂದ ಹೊರಬಂದ ಸಮೀರಾಚಾರ್ಯ ನೇರವಾಗಿ ಸೀಕ್ರೆಟ್ ರೂಮ್ ಒಳಗೆ ತೆರಳಿದರು. ಅಲ್ಲಿ, ಜಯಶ್ರೀನಿವಾಸನ್ ಜೊತೆ 'ಪ್ರಜಾರಾಜ್ಯ' ಟಾಸ್ಕ್ ನಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡರು.ನಾಮಿನೇಟ್ ಆಗಿದ್ದ ಸಮೀರಾಚಾರ್ಯ ಗೆ ವೀಕ್ಷಕರ ಬೆಂಬಲ ಸಿಕ್ಕ ಪರಿಣಾಮ ಸೀಕ್ರೆಟ್ ರೂಮ್ಮ ನಲ್ಲಿ ಇದ್ದ ಅವರನ್ನ ವಾಪಸ್ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಿದರು ಕಿಚ್ಚ ಸುದೀಪ್.

Recommended