ಕನ್ನಡ ನಟ ಶಿವರಾಜ್ ಕುಮಾರ್ ಕರ್ನಾಟಕ ಚುನಾವಣೆ 2018ರ ಬಗ್ಗೆ ಹೇಳಿದ್ದು ಹೀಗೆ | Oneindia Kannada

  • 6 years ago
Sandalwood Ace actor Shivaraj Kumar clears that no one is going to contest in upcoming assembly election from their family. He also said that he support actor Upendra's decision to enter in politics.


ಮುಂಬರುತ್ತಿರುವ 2018ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ ಎಂದು ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರಕ್ಕೆ ಗ್ರೀನ್ ವ್ಯಾಲಿ ಬಡಾವಣೆ ಉದ್ಘಾಟನೆಗೆಂದು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನಮಗೆ ಎಲ್ಲಾ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ, ಒಂದು ಪಕ್ಷಕ್ಕೆ ಸೀಮಿತವಾಗುವುದು ಇಷ್ಟವಿಲ್ಲ, ಹಾಗಾಗಿ ಈ ಬಾರಿ ನಮ್ಮ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದರು. ಕಳೆದ ಚುನಾವಣೆಯಲ್ಲಿ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಜೆಡಿಎಸ್ ನಿಂದ ಚುನಾವಣೆಯಿಂದ ಸ್ಪರ್ಧಿಸಿ ಸೋತಿದ್ದರು.ಹೊಸ ಪಕ್ಷ ಕಟ್ಟಿರುವ ತಮ್ಮ ಸ್ನೇಹಿತ, ನಟ ಉಪೇಂದ್ರ ಅವರಿಗೆ ಶುಭ ಕೋರಿದ ಶಿವರಾಜ್ ಕುಮಾರ್, 'ಉಪೇಂದ್ರ ಅವರಿಗೆ ರಾಜಕೀಯ ಮುನ್ನೋಟ ಚೆನ್ನಾಗಿದೆ, ಸಾಕಷ್ಟು ಕನಸುಗಳಿವೆ, ಅವರು ರಾಜಕೀಯದಲ್ಲಿ ಯಶಸ್ಸು ಕಾಣಲಿ, ಅವರಿಗೆ ನನ್ನ ಬೆಂಬಲ ಇದೆ' ಎಂದರು.

Recommended