ಶಿವಣ್ಣನನ್ನ ಸಂತೋಷ್ ಥಿಯೇಟರ್ ನಲ್ಲಿ ಅಚಾನಕ್ಕಾಗಿ ಭೇಟಿ ಮಾಡಿದ ಧ್ರುವ ಸರ್ಜಾ

  • 7 years ago
ಸಂತೋಷ್ ಚಿತ್ರಮಂದಿರದಲ್ಲಿ ಶಿವಣ್ಣ-ಧ್ರುವ ಭೇಟಿ ಆದ್ಮೇಲೆ ಏನಾಯ್ತು? ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟ ಶ್ರೀಮುರಳಿ ಅಭಿನಯದ 'ಮಫ್ತಿ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಮಫ್ತಿ' ಚಿತ್ರ ಪ್ರದರ್ಶನವಾಗುತ್ತಿರುವ ಕೆಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದರು. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಕೂತು ಸಿನಿಮಾ ನೋಡಿದರು. ಈ ವೇಳೆ ನಟ ಧ್ರುವ ಸರ್ಜಾ ಆಗಮಿಸಿ ಸರ್ಪ್ರೈಸ್ ಕೊಟ್ಟರು. ಶಿವಣ್ಣ ಮತ್ತು ಧ್ರುವ ಒಟ್ಟಿಗೆ ಕಾಣಿಸಿಕೊಂಡಿದ್ದು ಮಾತ್ರ ಗಾಂಧಿನಗರದಲ್ಲಿ ಹೊಸ ಚರ್ಚೆಗೆ ಕಾರಣವಾಯಿತು. ಹಾಗಿದ್ರೆ, ಶಿವಣ್ಣನ ಬಗ್ಗೆ ಧ್ರುವ ಏನಂದ್ರು? 'ಭರ್ಜರಿ' ಹುಡುಗನ ಬಗ್ಗೆ ಸೆಂಚುರಿ ಸ್ಟಾರ್ ಏನಂದ್ರು. ಈ ಹಿಂದೆ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಯಶಸ್ಸು ಕಂಡ ನಂತರ ಅವರ ಅಭಿಮಾನಿಗಳು ಹ್ಯಾಟ್ರಿಕ್ ಹೀರೋ ಎಂದು ಕರೆದರು. ಇದು ಶಿವಣ್ಣನ ಅಭಿಮಾನಿಗಳನ್ನ ಸಹಜವಾಗಿ ಕೆರಳಿಸಿತ್ತು. ನಂತರ 'ಹ್ಯಾಟ್ರಿಕ್ ಹೀರೋ' ಎಂಬುದು ಶಿವಣ್ಣ ಮಾತ್ರ ಎಂದು ಧ್ರುವ ಹೇಳಿ ಸೆಂಚುರಿ ಸ್ಟಾರ್ ಅಭಿಮಾನಿಗಳ ಮನಗೆದ್ದಿದರು.

Recommended