ಈ ವಾರದ ಮಹಿಳಾ ಸಾಧಕಿ : ವನಿತಕ್ಕ | ಯೋಗಾ ಟೀಚರ್ ಹಾಗು ಗೈಡ್ | Oneindia Kannada

  • 7 years ago
Yogashree one of the projects of Hindu Seva pratishtana has been offering training in yoga and treatment of common ailments with home remedies for the last 25 years. Every day around 500 people learn and practice Yoga here. Vanithakka is the spearhead and inspiration for all current activities of Yogashree. She is the woman achiever of the week.

ಯೋಗ, ಹೊಟ್ಟೆಕರಗಿಸುವ ವ್ಯಾಯಾಮವಷ್ಟೇ ಅಲ್ಲ, ಅದು ಜೀವನ ಮೌಲ್ಯ: ವನಿತಕ್ಕ. ಯೋಗದ ಸಾಧನೆಯ ಮಹತ್ವ ಮತ್ತು ಮಹೋನ್ನತಿಯ ಅರಿವಿದ್ದರೂ ಅದನ್ನು ನಮ್ಮ ಜೀವನದ ಒಂದು ಪದ್ಧತಿ ಎಂದು ಒಪ್ಪಿಕೊಳ್ಳಲು ನಾವು ಹಿಂದೆ ಬಿದ್ದಿದ್ದೀವಾ? ಯೋಗ ಹೊಟ್ಟೆ ಕರಗಿಸುವ ವ್ಯಾಯಾಮವಷ್ಟೇ ಆಗದೆ, ಅದು ಬದುಕು ಬದಲಿಸುವ ಜೀವನ ಮೌಲ್ಯವಾದರೆ ಯೋಗಾಚರಣೆಯನ್ನು ನೋಡುವ ದೃಷ್ಟಿಕೋನವೇ ಬದಲಾದೀತು ಎಂಬುದು ಬೆಂಗಳೂರಿನ ಗಿರಿನಗರದ 'ಯೋಗಶ್ರೀ'ಯ ಸಹೋದರಿ ವನಿತಾ ಅವರ ಅಭಿಪ್ರಾಯ.ಕಳೆದ 45 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಾಮಾಜಿಕ ಬದುಕಿನಲ್ಲಿ ತೊಡಗಿಕೊಂಡಿರುವ ಶಿವಮೊಗ್ಗದ, ಹೊಸನಗರ ಮೂಲದ ಸಹೋದರಿ ವನಿತಾ, ಅವರೆಲ್ಲ ಶಿಷ್ಯರಿಗೆ, ಬಂಧು, ಅಭಿಮಾನಿಗಳಿಗೆ ವನಿತಕ್ಕ ಎಂದೇ ಪರಿಚಿತರು. ಪ್ರತಿವ್ಯಕ್ತಿಯನ್ನೂ ಆಪ್ತ ಮನೋಭಾವದಲ್ಲೇ ನೋಡುವ, ಒಡನಾಡುವ, ಬದುಕಿನಲ್ಲಿ ಪ್ರತಿಕ್ಷಣ ಧನಾತ್ಮಕ ಚಿಂತನೆಯನ್ನೇ ನೆಲೆಗೊಳಿಸುವ, 'ಭಾರತ' ಎಂದೊಡನೆ ಅದಮ್ಯ ಉತ್ಸಾಹದಲ್ಲಿ ಕಣ್ಣರಳಿಸುವ, ಯೋಗಶ್ರೀ ಮೂಲಕ ಅಸಂಖ್ಯ ಜನರಿಗೆ ಭಾರತೀಯ ಸನಾತನ ಯೋಗಪದ್ಧತಿಯನ್ನು ಪರಿಚಯಿಸಿದ ವನಿತಕ್ಕ, ನಮ್ಮ ಈ ವಾರದ ಸಾಧಕಿ.