ಕನ್ನಡ ಸಾಹಿತ್ಯ ಸಮ್ಮೇಳನ ಟ್ವಿಟ್ಟರಲ್ಲಿ ಟ್ರೆಂಡಿಂಗ್ | Oneindia Kannada

  • 6 years ago
ಬೆಂಗಳೂರು, ನವೆಂಬರ್ 24: 'ಭಾಷೆ ಬೆಳೆಯಲು ಸಾಹಿತ್ಯವೂ ಅತ್ಯಂತ ಮುಖ್ಯ. ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಿ,ಗೌರವಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿದ್ದೇವೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡದ ಕಂಪನ್ನು ನಾಡಿನ ಮೂಲೆಮೂಲೆಗೂ ಹರಡುವಲ್ಲಿ ಯಶಸ್ವಿಯಾಗಲಿ,ಕನ್ನಡ ನಾಡು-ನುಡಿ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ' ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಟ್ವೀಟ್ ಮಾಡಿದ್ದಾರೆ.ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಸಿದ್ದರಾಮಯ್ಯ ಅವರ ಟ್ವೀಟ್ ಸೇರಿದಂತೆ ಕನ್ನಡ ಭಾಷೆ, ಸಂಸ್ಕೃತಿ, ಸಮ್ಮೇಳನ ಚಿತ್ರ, ವಿಶೇಷಗಳ ಬಗ್ಗೆ ಸರಣಿ ಟ್ವೀಟ್ ಗಳು ಗುರುವಾರ ಬೆಳಗ್ಗೆನಿಂದಲೇ ಆರಂಭವಾಗಿವೆ. ಈ ಮೂಲಕ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಬೆಂಗಳೂರಿನ ಟ್ರೆಂಡ್ ಮ್ಯಾಪ್ ನಲ್ಲಿ #kannadasahityasammelana ಟ್ರೆಂಡ್ ಆಗಲು ಶುರುವಾಗಿದೆ.ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. 83 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಶುಭಾಶಯಗಳು. ಕನ್ನಡ ನಮ್ಮ ಹೆಮ್ಮೆ ಎಂಬ ಟ್ವೀಟ್ ಗಳು ಹರಿದಾಡುತ್ತಿವೆ. ಹೆಮ್ಮೆಯ ಕನ್ನಡಿಗರೇ ನೀವು ಟ್ವೀಟ್ ಮಾಡಿ, ನುಡಿಹಬ್ಬದ ಬಗ್ಗೆ ನಮಗೂ ತಿಳಿಸಿ.

83rd Kannada Sahitya Sammelana begins in Mysuru. #kannadasahityasammelana Trending today on Twitter,. watch this video

Recommended