ವಿಡಿಯೋ, ಚಿತ್ರಗಳಲ್ಲಿ ನೋಡಿ 'ಓಖಿ' ಚಂಡಮಾರುತದ ಅವಾಂತರ | Oneindia Kannada

  • 7 years ago
ಚೆನ್ನೈ, ಡಿಸೆಂಬರ್ 1: ಗಾಳಿಯ ರಭಸಕ್ಕೆ ರುದ್ರ ನರ್ತನ ಆರಂಭಿಸಿದ ಮರದ ರೆಂಬೆ - ಕೊಂಬೆಗಳು, ಎಡಬಿಡದೆ ಸುರಿವ ಮಳೆ, ಏನಾಗಿಬಿಡುತ್ತದೋ ಎಂಬ ಆತಂಕದಲ್ಲೇ ಮನೆಯಿಂದ ಹೊರಗೇ ಬರದೆ ಮುದುಡಿ ಕುಳಿತ ಜನ, ರಸ್ತೆಯ ತುಂಬೆಲ್ಲ ಗಾಳಿ-ಮಳೆಯ ಭೋರ್ಗರೆತವಲ್ಲದೆ ಬೇರೆ ಸದ್ದಿಲ್ಲ... ಇದು ತಮಿಳುನಾಡಿನ ಚಿತ್ರ! ತಮಿಳು ನಾಡು ಮಾತ್ರವಲ್ಲ, ಕೇರಳದ ಹಲವೆಡೆಯೂ ಓಖಿ ಸದ್ದು ಮಾಡುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಓಖಿ ಎಂಬ ವಿಚಿತ್ರ ಹೆಸರಿನ ಚಂಡಮಾರುತಕ್ಕೆ ಈಗಾಗಲೇ ಬಲಿಯಾದವರ ಸಂಖ್ಯೆ 8 ಕ್ಕೂ ಹೆಚ್ಚು.

ಮನೆಯಿಂದ ಹೊರಗಂತೂ ಅಡಿಯಿಡಲಾಗದ ಸ್ಥಿತಿಯಲ್ಲಿರುವ, ತಮಿಳುನಾಡು, ಕೇರಳದ ಜನ ಮನೆಯ ಕಿಟಕಿಯಿಂದಲೇ ಚಂಡಮಾರುತದ ಭಯಾನಕ ಚಿತ್ರ, ವಿಡಿಯೋಗಳನ್ನು ಟ್ವಿಟ್ಟರ್ ನಲ್ಲಿ ಹರಿಬಿಡುತ್ತಿದ್ದಾರೆ! #CycloneOckhi ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಓಖಿಯ ಅಬ್ಬರವನ್ನು ಪ್ರತಿಬಿಂಬಿಸುವ ಹಲವು ವಿಡಿಯೋ ಮತ್ತು ಚಿತ್ರಗಳಿಗಳು ಟ್ವಿಟ್ಟರ್ ನಲ್ಲಿವೆ.

Deadliest Ochki cyclone, which hits Tamil Nadu killed more than 8 people till now. Here are viral videos, which reflect intensity of the Ockhi cyclone.