ಗಾಂಧಿನಗರದ ಈ ಮೂರು ನಿರ್ದೇಶಕರ ಖುಷಿಗೆ ಒಂದೇ ಕಾರಣ | Filmibeat Kannada

  • 7 years ago
ಒಂದು ಸಿನಿಮಾಗೆ ಕಥೆ ಮತ್ತು ನಿರ್ದೇಶಕ ಬಹಳ ಮುಖ್ಯ. ಸಿನಿಮಾ ಹುಟ್ಟುವುದೇ ಒಬ್ಬ ನಿರ್ದೇಶಕನಿಂದ. ಅದೇ ರೀತಿ ಕನ್ನಡದಲ್ಲಿಯೂ ಅನೇಕ ಪ್ರತಿಭಾವಂತ ನಿರ್ದೇಶಕರು ಇದ್ದಾರೆ. ಅದರಲ್ಲಿ ಮೂರು ನಿರ್ದೇಶಕರು ಈಗ ದಶಕದ ಸಂಭ್ರಮದಲ್ಲಿ ಇದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಗಳಾದ ದುನಿಯಾ ಸೂರಿ, ಶಶಾಂಕ್ ಮತ್ತು ಆರ್.ಚಂದ್ರು ಈಗ ಹತ್ತು ವರ್ಷ ಪೂರೈಸಿರುವ ಖುಷಿಯಲ್ಲಿದ್ದಾರೆ. ನಿರ್ದೇಶಕ ಸೂರಿ, ದುನಿಯಾ ಸೂರಿ ಅಂತಲೇ ಗಾಂಧಿನಗರದಲ್ಲಿ ಫೇಮಸ್. ಸಿನಿಮಾದಿಂದ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಸೂರಿ ಈಗ 10 ವರ್ಷವನ್ನು ಚಿತ್ರರಂಗದಲ್ಲಿ ಕಳೆದಿದ್ದಾರೆ. ಸೂರಿ ನಿರ್ದೇಶನದ ಮೊದಲ ಸಿನಿಮಾ 'ದುನಿಯಾ' 2007ರಲ್ಲಿ ಬಂದಿದ್ದು, ಈಗ ಸೂರಿ ದಶಕದ ನಿರ್ದೇಶಕನಾಗಿದ್ದಾರೆ. ಕನ್ನಡದ ಮತ್ತೊಬ್ಬ ನಿರ್ದೇಶಕ ಶಶಾಂಕ್ ಕೂಡ ಹತ್ತು ವರ್ಷ ಕಂಪ್ಲೀಟ್ ಮಾಡಿದ್ದಾರೆ. 2007ರಲ್ಲಿ ಪ್ರಜ್ವಲ್ ದೇವರಾಜ್ ನಟನೆಯ 'ಸಿಕ್ಸರ್' ಸಿನಿಮಾದ ಮೂಲಕ ಶಶಾಂಕ್ ಸ್ವತಂತ್ರ ನಿರ್ದೇಶಕರಾದರು.

The 3 star directors of kannada film industry are celebrating their 10th anniversary as directors