ಅಂಬರೀಷ್ ಜೆಡಿಎಸ್ ಸೇರುವ ವಿಷ್ಯಕ್ಕೆ ಕೊನೆಗೂ ತೆರೆ ಬಿತ್ತು | ಮಂಡ್ಯದಿಂದ ಹೊಸ ಸುದ್ದಿ | Oneindia Kannada

  • 7 years ago
Mandya JDS leaders said that, Former minister and Mandya MLA Ambareesh will not join party.


ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗೆ ತೆರೆ ಬಿತ್ತು! ಮಾಜಿ ವಸತಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗಳಿಗೆ ತೆರೆ ಬಿದ್ದಿದೆ. ಸ್ವತಃ ಮಂಡ್ಯ ಜಿಲ್ಲಾ ಜೆಡಿಎಸ್ ನಾಯಕರು ಈ ಕುರಿತು ಸ್ಪಷ್ಟನೆಗಳನ್ನು ನೀಡಿದ್ದಾರೆ. 'ಅಂಬರೀಶ್ ಜೆಡಿಎಸ್ ಸೇರುವ ಪ್ರಸ್ತಾವನೆ ಇಲ್ಲ. ಹಲವು ವರ್ಷಗಳ ಕಾಲ ಜೆಡಿಎಸ್‌ಗೆ ದುಡಿದಿರುವ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇದೆ. ಅವರನ್ನು ಬಿಟ್ಟು ಅಂಬರೀಶ್‌ ಅವರಿಗೆ ಟಿಕೆಟ್ ನೀಡುವ ಪ್ರಸ್ತಾಪವಿಲ್ಲ' ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಹೇಳಿದರು.ಶಾಸಕರಾದ ನಂತರ ಅಂಬರೀಶ್ ಅವರು ಕ್ಷೇತ್ರದ ಕಡೆ ಬರುವುದು ಅಪರೂಪ. ರೈತರ ಸರಣಿ ಆತ್ಮಹತ್ಯೆಗಳು ನಡೆದರೂ ಅಂಬರೀಶ್ ಬಂದಿಲ್ಲ ಎಂದು ಜನಾಕ್ರೋಶವಿದೆ. ಆದ್ದರಿಂದ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ಜೆಡಿಎಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Recommended