ಬಿಗ್ ಬಾಸ್ ಕನ್ನಡ ಸೀಸನ್ 5 : ಚಂದನ್ ಶೆಟ್ಟಿಗೆ ಶ್ರುತಿ ಪ್ರಕಾಶ್ ಮೇಲೆ ಲವ್ವಾಗಿದೆ

  • 7 years ago
ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.! ಆದ್ರೆ, ಶ್ರುತಿಗೆ ಯಾರಂದ್ರೆ ಇಷ್ಟ.? ಇತ್ತೀಚೆಗಷ್ಟೇ ''ನನಗೆ ಲವ್ ಆಗುವ ಹಾಗೆ ಕಾಣುತ್ತಿದೆ'' ಎಂದು ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. 'ದೊಡ್ಮನೆ'ಯಲ್ಲಿ ಲೈಟ್ ಆಫ್ ಮಾಡಿದ್ಮೇಲೆ ಆಶಿತಾ, ಜಗನ್ ಮತ್ತು ಕೃಷಿ ಜೊತೆ ಮಾತನಾಡುವಾಗ ಚಂದನ್ ಶೆಟ್ಟಿ ತಮಗೆ ಲವ್ ಆಗುತ್ತಿದೆ ಅಂತ ಬಾಯ್ಬಿಟ್ಟಿದ್ದರು. ಚಂದನ್ ಶೆಟ್ಟಿ ಲವ್ ಮಾಡುತ್ತಿರುವ ಹುಡುಗಿ ಯಾರು ಅಂತ ಇದೀಗ ನಟಿ ಅನುಪಮಾ ಗೌಡ ಬಾಯ್ಬಿಟ್ಟಿದ್ದಾರೆ.'ಬಿಗ್ ಬಾಸ್' ಸ್ಪರ್ಧಿಯಾಗಿರುವ ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿಗೆ ಲವ್ ಆಗಿದ್ಯಂತೆ. ಹಾಗಂತ ಅನುಪಮಾ ಗೌಡ ಏನೋ ಹೇಳಿಬಿಟ್ಟರು. ಅದಕ್ಕೆ ಶ್ರುತಿ ಪ್ರಕಾಶ್ ಪ್ರತಿಕ್ರಿಯೆ ಹೇಗಿತ್ತು ಅಂದ್ರೆ....ಗಾರ್ಡನ್ ಏರಿಯಾದಲ್ಲಿ 'ಬೂಟಾಟಿಕೆ' ಟಾಸ್ಕ್ ನಡೆಯುತ್ತಿದ್ದರೆ, ಲಿವಿಂಗ್ ಏರಿಯಾದಲ್ಲಿ ಚಂದನ್ ಶೆಟ್ಟಿ ಲವ್ ಮ್ಯಾಟರ್ ಬಗ್ಗೆ ಮಾತುಕತೆ ನಡೆಯುತ್ತಿತ್ತು.

Recommended