ರಶ್ಮಿಕಾ ಮಂದಣ್ಣ ಅದೃಷ್ಟದ ಬಗ್ಗೆ ಮಾತನಾಡೋದೇ ಬೇಕಿಲ್ಲ. ಆಕೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಾ ಹೋಗಿದೆ. ಈ ಚಿನ್ನದಂಥಾ ಚೆಲುವೆ ಬಾಯಿಬಿಟ್ರೆ ಮಾತ್ರ ಇದು ಚಿನ್ನ ಅಲ್ಲ ತಗಡು ಅನ್ನೋದು ಗೊತ್ತಾಗುತ್ತೆ. ಅಷ್ಟಕ್ಕೂ ರಶ್ಮಿಕಾ ಗೊತ್ತಿಲ್ಲದೇ ತಪ್ಪು ಮಾಡ್ತಾರೋ ಅಥವಾ ತಾನೇನು ಹೇಳಿದರೂ ಸರಿ ಅನ್ನೋ ಅಹಂನಲ್ಲಿ ಹೇಳ್ತಾರೋ ಗೊತ್ತಿಲ್ಲ. ಒಟ್ನಲ್ಲಿ ರಶ್ಮಿಕಾ ಬಾಯಿಬಿಟ್ಟಾಗೆಲ್ಲಾ ಕಿರಿಕ್ ಫಿಕ್ಸ್.