Big Bulletin | Chinese Military Ship Docks At Sri Lanka Port Despite Indian Concern | HR Ranganath | Aug 16, 2022
  • 2 years ago
ಭಾರತ ಏನಾಗಬಾರದು ಎಂದು ಬಯಸುತ್ತಿತ್ತೋ ಅದೇ ಆಗಿದೆ. ಭಾರತದ ಸಲಹೆ ಕಿಮ್ಮತ್ತು ಕೊಡದ ಶ್ರೀಲಂಕಾ, ಚೀನಾದ ನಿಗಾ ನೌಕೆಯನ್ನು ತನ್ನ ಬಂದರಿಗೆ ಬಿಟ್ಟುಕೊಂಡಿದೆ. ಇಂದು ಬೆಳಗ್ಗೆ ಲಂಕಾದ ಹಂಬನ್‍ಟೋಟಾ ಬಂದರಿಗೆ ಚೀನಾದ ಯುವಾನ್ ವಾಂಗ್-5 ನೌಕೆ ಬಂದು ಲಂಗರು ಹಾಕಿದೆ. ಈ ನೌಕೆಯ ಬರುವಿಕೆಯನ್ನು ಎರಡು ವಾರಗಳ ಹಿಂದೆಯೇ ತಿಳಿದಿದ್ದ ಭಾರತ, ಅದನ್ನು ಬಿಟ್ಟುಕೊಳ್ಳಬೇಡಿ ಎಂದು ಲಂಕಾ ಮೇಲೆ ಒತ್ತಡ ಹೇರಿತ್ತು. ಲಂಕಾದ ವಿಕ್ರಮಸಿಂಘೆ ಸರ್ಕಾರ ಕೂಡ ತಕ್ಷಣ ಚೀನಾದ ನೌಕೆ ಬರುವಿಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಯುವಾನ್ ವಾಂಗ್-5 ಪ್ರಯಾಣವನ್ಮು ಮುಂದೂಡುವಂತೆ ಚೀನಾಗೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ಚೀನಾ ಆರಂಭದಲ್ಲಿ ಒಪ್ಪಿಗೆ ಸೂಚಿಸಿತ್ತು ಎನ್ನಲಾಗಿತ್ತು. ಆದ್ರೆ, ಕಳೆದ ವಾರ ಚೀನಾದ ನಿಗಾ ನೌಕೆ ಹಂಬನ್‍ಟೋಟಾ ಕಡೆ ಚಲಿಸ್ತಿರೋದನ್ನು ಪತ್ತೆ ಹಚ್ಚಲಾಗಿತ್ತು. ಈ ಬಗ್ಗೆ ಲಂಕಾ ಪ್ರಶ್ನಿಸಿದ್ರೆ ಚೀನಾದಿಂದ ಸರಿಯಾದ ಉತ್ತರ ಬಂದಿರಲಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೇ ಲಂಕಾ, ಚೀನಾ ನೌಕೆಗೆ ಶನಿವಾರ ಅನುಮತಿ ಮಂಜೂರು ಮಾಡಿತ್ತು. ಈ ನೌಕೆ ಲಂಕಾ ಜಲ ಪ್ರದೇಶವನ್ನು ಪ್ರವೇಶಿಸಿದ ನಂತ್ರ ಆಟೋಮೆಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್ ಆಫ್ ಮಾಡುವ ಷರತ್ತನ್ನು ವಿಧಿಸಲಾಗಿದೆ ಎಂದು ಕೊಲಂಬೋ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಇಂದಿನಿಂದ ಆಗಸ್ಟ್ 22ರವರೆಗಿನ ಅವಧಿಯಲ್ಲಿ ಇಂಧನ ತುಂಬಿಸಿಕೊಳ್ಳಲು ಮಾತ್ರ ಅನುಮತಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದ್ರೆ, ಚೀನಾದ ಸಾಲದ ಹಿಡಿತದಲ್ಲಿ ಲಂಕಾ ಇದೆ. ಹಂಬನ್‍ಟೋಟಾ ಬಂದರು ಅಭಿವೃದ್ಧಿಗೆ ಚೀನಾ 1.2 ಬಿಲಿಯನ್ ಡಾಲರ್ ಸಾಲ ನೀಡಿದೆ. ಇದನ್ನು ವಾಪಸ್ ಮಾಡಲಾದ ಕಾರಣ ಹಂಬನ್‍ಟೋಟಾ ಬಂದರನ್ನು ಚೀನಾಗೆ 99 ವರ್ಷ ಲೀಸ್‍ಗೆ ನೀಡಿದೆ. ಚೀನಾದ ಈ ನಡೆ ಭಾರತ ಉಪಖಂಡದ ಶಾಂತಿಯನ್ನು ಕದಡುವ ಸಾಧ್ಯತೆ ಇದೆ.

#publictv #hrranganath #bigbulletin
Recommended