News Cafe | Praveen Nettaru Case: NIA Officially Started Investigation | HR Ranganath | Aug 8, 2022
  • 2 years ago
ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್‍ಐಎ ದೆಹಲಿಯಲಿ ಕಚೇರಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈ ಮೂಲಕ, ಅಧಿಕೃತವಾಗಿ ತನಿಖೆ ಆರಂಭಿಸಿದೆ. ಬಂಧಿತ ಆರೋಪಿಗಳು ಸೇರಿ ನಾಪತ್ತೆಯಾದವರ ಮೇಲೆ ಎಫ್‍ಐಆರ್ ದಾಖಲಿಸಿರೋ ಎನ್‍ಐಎ, ಕೋರ್ಟ್‍ಗೆ ಪ್ರತಿಸಲ್ಲಿಸಿದೆ. ಈಗಾಗಲೇ ಸುಳ್ಯ, ಪುತ್ತೂರಿನಲ್ಲಿ ಬೀಡು ಬಿಟ್ಟಿರುವ ಎನ್‍ಐಎ ತಂಡ ನಾಪತ್ತೆಯಾಗಿರೊ ಆರೋಪಿಗಳಿಗೆ ಶೋಧ ನಡೆಸ್ತಿದೆ. ಇನ್ನು, ಸುಳ್ಯದ ನಾವೂರು ನಿವಾಸಿ ಅಬಿದ್ ಮತ್ತು ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ ಎಂಬ ಇಬ್ಬರನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಬಂಧಿತರನ್ನು ಗೌಪ್ಯ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗ್ತಿದೆ. ಈ ಮೂಲಕ ಈವರೆಗೆ ಒಟ್ಟು 6 ಜನರ ಬಂಧನವಾಗಿದೆ. ಆದರೆ, ಘಟನೆ ನಡೆದು 13 ದಿನ ಕಳೆದಿದ್ದರೂ ಪ್ರವೀಣ್ ಕೊಂದ ಪ್ರಮುಖ ಆರೋಪಿಯ ಬಂಧನ ಆಗಿಲ್ಲ. ಇನ್ನು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ವಿಧಿಸಿದ್ದ ಕೆಲ ನಿರ್ಬಂಧಗಳನ್ನು ಸಡಿಲ ಮಾಡಲಾಗಿದೆ. ಆಗಸ್ಟ್ 14ರ ಮಧ್ಯರಾತ್ರಿವರೆಗೆ ಸೆಕ್ಷನ್ 144 ಮುಂದುವರಿಸಲಾಗಿದ್ದು.. ಅಂಗಡಿ ಮುಂಗಟ್ಟು ಸೇರಿದಂತೆ ಮದ್ಯದಂಗಡಿ ಓಪನ್‍ಗೆ ಅವಕಾಶ ನೀಡಲಾಗಿದೆ.

#publictv #newscafe #hrranganath
Recommended