ಪೀಣ್ಯದಲ್ಲಿ ಹೈಟೆಕ್ ಪದವಿ, ಪಿಯುಸಿ ಕಾಲೇಜು, ಮಾದರಿ ಶಾಲೆ ಲೋಕಾರ್ಪಣೆ | Peenya | Public TV

  • 2 years ago
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಪೀಣ್ಯದಲ್ಲಿ ಹೈಟೆಕ್ ಪದವಿ ಕಾಲೇಜು, ಹೈಟೆಕ್ ಪಿಯುಸಿ ಕಾಲೇಜು, ಮಾದರಿ ಶಾಲೆ ಲೋಕಾರ್ಪಣೆ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ನೆರವೇರಿಸಿದ್ರು. ಶಾಸಕರು ಹಾಗೂ ಸಚಿವರಾದ ಮುನಿರತ್ನ ಅವ್ರ ಆಸಕ್ತಿಯಿಂದ ಈ ಅತ್ಯಾಧುನಿಕ ಸರ್ಕಾರಿ ಶಾಲಾ-ಕಾಲೇಜುಗಳ ನಿರ್ಮಾಣ ಆಗಿದೆ. ಖಾಸಗಿ ಶಾಲಾ-ಕಾಲೇಜುಗಳಿಗೆ ಕಡಿಮೆ ಇಲ್ಲದಂತೆ ಈ ನೂತನ ಶಾಲಾ-ಕಾಲೇಜುಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ಲ್ಯಾಬ್ ವ್ಯವಸ್ಥೆ, ಸುಸಜ್ಜಿತವಾದ ಕೊಠಡಿಗಳು, ನುರಿತ ಶಿಕ್ಷಣ, ಉಪನ್ಯಾಸಕರ ವರ್ಗ, ವಿಶಾಲವಾದ ಆಟದ ಮೈದಾನ ಈ ಶಾಲಾ-ಕಾಲೇಜುಗಳು ಹೊಂದಿವೆ. ಇದೇ ವೇಳೆ ಪೀಣ್ಯದ ಆಂಜನೇಯ ಸ್ವಾಮಿ ದೇವಸ್ಥಾನದ ಹೆಬ್ಬಾಗಿಲನ್ನು ಸಿಎಂ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದಲ್ಲಿ ಸಚಿವರಾದ ಭೈರತಿ ಬಸವರಾಜ್, ಬಿ.ಸಿ ನಾಗೇಶ್, ಗೋಪಾಲಯ್ಯ ಭಾಗವಹಿಸಿದ್ರು.

#publictv #cmbasavarajbommai

Recommended