Skip to playerSkip to main contentSkip to footer
  • 7/16/2022
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಮೊಬೈಲ್ ಬಳಸಬಾರದು ಯಡವಟ್ ಆದೇಶ ಹೊರಡಿಸಿದ್ದ ಸರ್ಕಾರ, ತೀವ್ರ ಟೀಕೆ-ಜನಾಕ್ರೋಶ ವ್ಯಕ್ತವಾದ ಬಳಿಕ ಹಿಂಪಡೆದಿದೆ. ಈ ಮರು ಆದೇಶದಲ್ಲಿ ಕನ್ನಡದ ಕೊಲೆ ಮಾಡಿ ಮತ್ತೊಂದು ಯಡವಟ್ ಮಾಡಿದೆ. ಮಧ್ಯರಾತ್ರಿ ಹೊರಡಿಸಿದ ಆದೇಶದಲ್ಲಿ ಸಾಕಷ್ಟು `ಕಾಗುಣಿತ ದೋಷ' ಇದ್ದು, ಸರ್ಕಾರ ಮುಜುಗರಕ್ಕೆ ಸಿಲುಕಿದೆ. ಸಣ್ಣಪುಟ್ಟ ಲೋಪದೋಷಗಳು ಆಗೋದು ಸಹಜ ಆದರೆ, 16 ಸಾಲುಗಳ ಆದೇಶ ಪ್ರತಿಯಲ್ಲಿ 7 ವ್ಯಾಕರಣ ದೋಷಗಳಿವೆ. ದುರಂತ ಅಂದರೆ ಕರ್ನಾಟಕ ಅನ್ನೋದನ್ನೇ ತಪ್ಪಾಗಿ `ಕರ್ನಾಟಾ' ಅಂತ ಟೈಪಿಸಿ.. ಮುದ್ರಿಸಲಾಗಿದೆ. ಇದರ ಜೊತೆಗೆ, ಪತ್ರದ ಹಣೆಬರಹ ಸರ್ಕಾರದ `ನಡಾವಳಿ'ಗಳು ಅನ್ನೋ ಕಡೆ `ನಡವಳಿ'ಗಳು, `ಪ್ರಸ್ತಾವನೆ' ಅನ್ನೋ ಕಡೆ `ಪ್ರಸತ್ತಾವನೆ', ಭಾಗ-1 ಬದಲಿಗೆ ಬಾಗ -1, ಆಡಳಿತ ಅನ್ನೋ ಕಡೆ `ಆಡಳಿದ' ಅಂತ ಪ್ರಿಂಟ್ ಆಗಿದೆ.
ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ನೋಡಿ ಸರ್ಕಾರದ ಕನ್ನಡ ಪ್ರೇಮ.... ಈ ಪತ್ರದಿಂದ ಉದಯವಾಯಿತು ಚೆಲುವ ಕನ್ನಡ ನಾಡು ಅಂತ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಇನ್ನು, ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ ಮೊಬೈಲ್ ನಿಷೇಧ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಜೊತೆಗೆ, ಫೋಟೋ, ವಿಡಿಯೋ ನಿಷೇಧ ಮಾಡುವ ಬಗ್ಗೆ ಮಹಿಳಾ ನೌಕರರು ತುಂಬಾ ದಿನಗಳಿಂದ ಕೇಳ್ತಿದ್ರು. ಪಾಪ ಅವರ ಮನವಿಯಲ್ಲೂ ಅರ್ಥ ಇದೆ ಅಂದಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಡಿಕೆಶಿ ಕಿಡಿಕಾರಿದ್ದಾರೆ.

#publictv #bigbulletin #hrranganath

Category

🗞
News

Recommended