News Cafe | Heavy Rain Lashes Several Parts Of Bengaluru | HR Ranganath | June 18, 2022
  • 2 years ago
ಬೆಂಗಳೂರಿನಲ್ಲಿ 2 ದಿನಗಳಿಂದ ರಾತ್ರಿ ಹೊತ್ತಲ್ಲೇ ಮಳೆ ಸುರೀತಿದೆ. ನಿನ್ನೆ ರಾತ್ರಿ ಮಹದೇವಪುರ ವಲಯದಲ್ಲಿ 90ರಿಂದ-180 ಮಿಲಿಮೀಟರ್‍ವರೆಗೆ ಮಳೆಯಾಗಿದೆ. 250ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜನ ಹೊರಬಾರದ ಸ್ಥಿತಿ ಇದೆ. ನಾಗವಾರದ ಎನ್‍ಜಿ ಲೇಔಟ್ ಸಂಪೂರ್ಣ ಜಲಾವೃತವಾಗಿದ್ದು, ಖಾಸಗಿ ಶಾಲೆಯೊಂದಕ್ಕೆ ರಜೆ ಘೋಷಿಸಲಾಗಿದೆ. ಕೆ.ನಾರಾಯಣಪುರದಲ್ಲಿ 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ತಿಂಗಳ ಹಿಂದೆ ಇದೇ ಡೇಟ್‍ಗೆ ಮುಳುಗಿದ್ದ ಹೊರಮಾವು ಬಳಿಯ ಸಾಯಿ ಲೇಔಟ್ ಮತ್ತೆ ಮುಳುಗಿದೆ. ಪಕ್ಕದ ಕಲ್ಕೆರೆ ಗ್ರಾಮ ಜಲಾವೃತವಾಗಿದ್ದು, ರಾತ್ರಿಯಿಡಿ ನೀರು ಹೊರಹಾಕುವುದರಲ್ಲಿ ಜನ ಜಾಗರಣೆ ಮಾಡಿದ್ರು. ಕೆ.ಆರ್ ಪುರಂ ಭಾಗದಲ್ಲಿ ಮಳೆರಾಯ ಆರ್ಭಟಿಸಿದ್ದು.. ಕಾವೇರಿ ನಗರದಲ್ಲಿ ಗೋಡೆ ಕುಸಿದು 55 ವರ್ಷದ ಮುನಿಯಮ್ಮ ಅನ್ನೋವ್ರು ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಾಯತ್ರಿ ಬಡಾವಣೆಯಲ್ಲಿ ಕೊಚ್ಚಿ ಹೋಗ್ತಿದ್ದ ಬೈಕ್ ರಕ್ಷಿಸಲು ಹೋದ 24 ವರ್ಷದ ಯುವಕ ಮಿಥುನ್ ನಾಪತ್ತೆ ಆಗಿದ್ದಾನೆ. ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ, ಎನ್‍ಡಿಆರ್‍ಎಫ್ ತಂಡ ಶೋಧ ನಡೆಸ್ತಿದ್ದಾರೆ. ಕೃಷ್ಣ ಚಿತ್ರಮಂದಿರದ ಗೋಡೆ ಕುಸಿದು 24 ಬೈಕ್‍ಗಳು ಜಖಂ ಆಗಿದೆ. ಮಳೆ ಬಾಧಿತರ ಪ್ರದೇಶಕ್ಕೆ ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಶಾಸಕ, ಸಚಿವ ಬೈರತಿ ಬಸವರಾಜ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಮಾರ್ಚ್ ಒಳಗೆ ಶಾಶ್ವತ ಪರಿಹಾರ ಕಲ್ಪಿಸ್ತೇವೆ ಅಂತ ಹೇಳಿದ್ದಾರೆ. ಈ ಮಧ್ಯೆ, ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಪಾಪಾಘ್ನಿ ನದಿ ತುಂಬಿದ್ದು, ಚೇಳೂರು ಬಳಿಯ ಚಂದ್ರಾಯನಪಲ್ಲಿ ಬಳಿ ರಸ್ತೆ ಕೊಚ್ಚಿ ಹೋಗಿದೆ.

#publictv #newscafe #hrranganath #rain
Recommended