News Cafe | New Plan To Solve Parking Problems In India | HR Ranganath | June 17, 2022

  • 2 years ago
ದೇಶದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ. ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಮಾಡುವವರ ವಾಹನದ ಫೋಟೋ ಹೊಡೆದು ಕಳುಹಿಸಿದರೆ.. ವಾಹನದ ಮಾಲೀಕನಿಗೆ ಸಾವಿರ ರೂಪಾಯಿ ದಂಡ ಹಾಕಿದ್ರೇ.. ಆ ದಂಡದಲ್ಲಿ 500 ರೂಪಾಯಿ ಅನ್ನು ಫೋಟೋ ಹೊಡೆದು ಕಳುಹಿಸಿದವರಿಗೆ ಬಹುಮಾನ ನೀಡಲಾಗುವುದು. ಹಲವು ಕಡೆಗಳಲ್ಲಿ ಮನೆಗಳಲ್ಲಿ ಪಾರ್ಕಿಂಗ್ ಸ್ಥಳ ಇರುವುದಿಲ್ಲ.. ಇದ್ರಿಂದ ರಸ್ತೆಗಳಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿರುತ್ತಾರೆ.. ಹೀಗಾಗಿ ಇದರ ಕಡಿವಾಣಕ್ಕೆ ಈ ರೀತಿ ಕಾನೂನು ಶೀಘ್ರವೇ ಜಾರಿಗೆ ತರಬಹುದು ಎನ್ನಲಾಗ್ತಿದೆ. ಇನ್ನು, ಬೆಂಗಳೂರಿನಲ್ಲೂ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಫೋಟೋ ಸಮೇತ ದೂರು ಸ್ವೀಕರಿಸಲು ಸಂಚಾರ ಪೊಲೀಸರು ಪಬ್ಲಿಕ್-ಐ ವ್ಯವಸ್ಥೆ ರೂಪಿಸಿದ್ದಾರೆ. ಟ್ರಾಫಿಕ್ ಹೆಚ್ಚಳ ಮತ್ತು ಸಿಬ್ಬಂದಿ ಕೊರತೆ ಹಿನ್ನೆಲೆ ಇದರ ಪರಿಹಾರವಾಗಿ ಪಬ್ಲಿಕ್-ಐ ರೂಪಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಫೋಟೋ ಸಮೇತ ದೂರು ಕೊಡಬಹುದು. ಇದು ಆಪ್ ಮೂಲಕ ಕಾರ್ಯನಿರ್ವಹಣೆ ಮಾಡಲಿದ್ದು.. ಸಾರ್ವಜನಿಕರು ತಮಗೆ ಅನುಕೂಲವಾದ ಭಾಷಾ ಮಾಧ್ಯಮದಲ್ಲಿ ದೂರು ನೀಡಬಹುದು. ಚಾಲನೆ ವೇಳೆ ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದಿರುವುದು, ಮೀಟರ್‍ದರಕ್ಕಿಂತ ಹೆಚ್ಚು ಹಣ ಕೇಳುವ ಚಾಲಕರು ಹೀಗೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ದೂರು ಕೊಡಬಹುದಾಗಿದೆ.

#publictv #newscafe #hrranganath

Recommended