Heavy Rain Lashes Sevreal Districts In Karnataka | Public TV
  • 2 years ago
Heavy Rain Lashes Sevreal Districts In Karnataka | Public TV

ರಾಜ್ಯದ ಕೆಲವೆಡೆ ಭಾನುವಾರ ಭಾರೀ ವರ್ಷಧಾರೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಳೆರಾಜ ಅವಾಂತರ ಸೃಷ್ಟಿಸಿದ್ದಾನೆ. ಸಿಡಿಲಿಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಅಲ್ಲಲ್ಲಿ ಜನಸಂಚಾರ ಅಸ್ತವ್ಯಸ್ತವಾಗಿದೆ.

ರಾಜ್ಯದ ಹಲವೆಡೆ ಮುಂಗಾರು ಆರ್ಭಟಿಸುತ್ತಿದೆ. ಸಂಜೆಯಿಂದಲೇ ಶುರುವಾದ ಮಳೆ ರಾತ್ರಿವೇಳೆಗೆ ಜೋರಾಗಿತ್ತು. ಭಾರೀ ಗಾಳಿ, ಗುಡುಗು-ಸಿಡಿಲಿನ ಸಮೇತ ಸುರಿದ ಮಳೆಗೆ ರಾಜ್ಯದ ಹಲವೆಡೆ ತತ್ತರಿಸುವಂತೆ ಮಾಡಿದೆ.

ಕೊಪ್ಪಳ ಜಿಲ್ಲಾದ್ಯಂತ ಗುಡುಗು- ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಜಿಲ್ಲೆಯ ಯಲಬುರ್ಗಾ ತಾಲೂಕು ಚಿಕ್ಕ ಮ್ಯಾಗೇರಿ ಗ್ರಾಮದ ಇಬ್ಬರು ಮಹಿಳೆಯರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ.

ಕೋಟೆನಾಡು ಚಿತ್ರದುರ್ಗದಲ್ಲೂ ಮಳೆ ಆಗಿದ್ದು.. ಚಳ್ಳಕೆರೆಯ ನೆಹರು ವೃತ್ತದ ಜಲಾವೃತವಾಗಿತ್ತು. ಅಲ್ಲದೇ ಗಾಳಿ, ಮಳೆಗೆ ತಗಡಿನ ಸೀಟು ನೆಲಕ್ಕುರುಳಿವೆ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳು ಮತ್ತು ಆಟೋಗಳು ಜಖಂ ಆಗಿದೆ.

ಕೋಲಾರ ಜಿಲ್ಲೆಯ ಮುಳಬಾಗಲು, ಶ್ರೀನಿವಾಸಪುರ, ಕೆಜಿಎಫ್, ಕೋಲಾರ ತಾಲ್ಲೂಕಿನ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಹಳ್ಳಿಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮನೆ ಹಾಗೂ ಕೊಟ್ಟಿಗೆಯ ಮೇಲ್ಛಾವಣಿಗಳು ಹಾರಿ ಹೋಗಿದೆ.

ಇನ್ನು ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಳಿ ಮಳೆ ಬಂದ ಹಿನ್ನೆಲೆ ಜಮೀನಿನಲ್ಲಿ ಮರದ ಕೆಳಗೆ ನಿಂತಿದ್ದ ಮೂವರು ಯುವಕರಿಗೆ ಸಿಡಿಲು ಬಡಿದು ಗಾಯಗಳಾಗಿದೆ. ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಬೆಂಗಳೂರಿನಲ್ಲೂ ರಾತ್ರಿ ಮಳೆ ಅಬ್ಬರಿಸಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಸದಾಶಿವನಗರ, ಹೆಬ್ಬಾಳ, ಯಲಹಂಕ, ಯಶವಂತಪುರ, ಶೇಷಾದ್ರಿಪುರಂ, ಕೆ.ಆರ್ ಮಾರ್ಕೆಟ್ ಸೇರಿದಂತೆ ಏರ್‌ಪೋರ್ಟ್ ಬಳಿ ಭಾರಿ ಮಳೆ ಆಗಿದೆ. ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

ಭಾರೀ ಗಾಳಿ ಸಮೇತ ಸುರಿದ ಮಳೆಗೆ ಏರ್‌ಪೋರ್ಟ್ನಲ್ಲಿದ್ದ ತಡೆಗೋಡೆಗಳು ಚೆಲ್ಲಾಪಿಲ್ಲಿ ಆಗಿದೆ.

ಮುಂಗಾರು ಆರಂಭದಲ್ಲೇ ಅಬ್ಬರಿಸುತ್ತಿದ್ದು.. ಮುಂದಿನ ದಿನಗಳಲ್ಲಿ ಮತ್ತಷ್ಟು ಅವಾಂತರಗಳು ಕಟ್ಟಿಟ್ಟಬುತ್ತಿ..

Recommended