Arabic Language Education For Over 200 Students At Srirangapatna Jamia Mosque | Public TV
  • 2 years ago
ಮಂಡ್ಯದಲ್ಲಿ ಜಾಮಿಯಾ ಮಸೀದಿ ವಿವಾದ ತೀವ್ರವಾಗಿದೆ. ಮಸೀದಿ ಜಾಗದಲ್ಲಿ ಮತ್ತೆ ಮೂಡಲಬಾಗಿಲು ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಹಿಂದೂ ಸಂಘಟನೆಗಳು ಆಗ್ರಹ ಮಾಡುತ್ತಿವೆ. ಟಿಪುö್ಪ ಸುಲ್ತಾನ್ ತನ್ನ ಆಡಳಿತದಲ್ಲಿ ದುರುದ್ದೇಶದಿಂದ ಇಲ್ಲಿದ್ದ ಮೂಡಲಬಾಗಿಲು ಆಂಜನೇಯಸ್ವಾಮಿ ದೇವರ ವಿಗ್ರಹವನ್ನು ಕಿತ್ತು ಕಾವೇರಿ ನದಿಗೆ ಎಸೆದಿದ್ದಾನೆ. ಬಳಿಕ ದೇವಸ್ಥಾನದ ಮೇಲೆಯೇ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಕಾವೇರಿ ನದಿಗೆ ಎಸೆದ ಆಂಚನೇಯಸ್ವಾಮಿ ವಿಗ್ರವನ್ನು ಹುಡುಕಿ ನಂಜರಾಜಯ್ಯ ಮತ್ತು ಶ್ರೀನಿವಾಸ್‌ಶಾಸ್ತ್ರಿ ಎಂಬುವವರು ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ಮತ್ತೆ ಉತ್ತರ ದಿಕ್ಕಿಗೆ ಮರುಪ್ರತಿಷ್ಠಾಪನೆ ಮಾಡಿದ್ದಾರೆ ಅಂತ ಹಿಂದೂ ಸಂಘಟನೆಯ ಮುಖಂಡರು ಹೇಳ್ತಿದ್ದಾರೆ. ಆದ್ರೆ ಈ ಜಾಮಿಯಾ ಮಸೀದಿ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ್ದಾಗಿದೆ. ಹೀಗಿರುವಾಗ ದೇಶದ ನಾನ ರಾಜ್ಯಗಳಿಂದ ಬಂದಿರುವ ಸುಮಾರು 200 ಮಂದಿ ಮುಸ್ಲಿಂ ಯುವಕರಿಗೆ ಮದರಸದ ಮಾದರಿಯಲ್ಲಿ ಇಸ್ಲಾಂ ಮತ್ತು ಅರೇಬಿಕ್ ಶಿಕ್ಷಣ ನೀಡಲಾಗ್ತಿದೆ ಅಂತ ಹಿಂದೂ ಮುಖಂಡರು ಆರೋಪಿಸಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಇಲ್ಲಿ ಅರೇಬಿಕ್ ಶಿಕ್ಷಣ ಕಲಿಯುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.

Arabic Language Education For Over 200 Students At Srirangapatna Jamia Mosque | Public TV

#publictv #srirangapatna #jamiamasjid

Watch Live Streaming On http://www.publictv.in/live

Recommended