News Cafe | Government Revises MLAs Telephone Bill Allowance To 20,000 Per Month | HR Ranganath
  • 2 years ago
News Cafe | Government Revises MLAs Telephone Bill Allowance To 20,000 Per Month | HR Ranganath

#PublicTV #NewsCafe #HRRanganath

ಜನರ ತೆರಿಗೆ ಹಣದಲ್ಲಿ ಜನಪ್ರತಿನಿಧಿಗಳು ಜಾತ್ರೆ ಮಾಡ್ತಿದ್ದಾರೆ. ಶಾಸಕರ ಮನೆ, ಕಾರು, ಫೋನ್ ಬಿಲ್ ಎಲ್ಲದಕ್ಕೂ ಜನರ ಟ್ಯಾಕ್ಸ್ ಹಣವೇ ಬೇಕು. ಜನರ ಕರ ಹಣವನ್ನು ಶಾಸಕರು ಬೇಕಾಬಿಟ್ಟಿ ಖರ್ಚು ಮಾಡ್ತಿದ್ದಾರೆ. ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳ ಪಡೆಯುವ ಶಾಸಕರು, ಅನಗತ್ಯ ಖರ್ಚಿನ ಮೂಲಕ ತೆರಿಗೆ ಹಣ ಪೋಲು ಮಾಡ್ತಿದ್ದಾರೆ. ಫೋನ್ ಬಿಲ್‌ನಲ್ಲೂ ನಮ್ಮ ಶಾಸಕರು ಶ್ರಿಮಂತರಾಗಿದ್ದಾರೆ. 3G, 4G, ಉಚಿತ ಕರೆಗಳ ಪ್ಲಾನ್ ಬಂದ್ರೂ ಸಾವಿರಾರು ರೂಪಾಯಿ `ಫೋನ್ ಬಿಲ್' ಹೆಸರಲ್ಲಿ ವಸೂಲಿ ಮಾಡ್ತಿದ್ದಾರೆ. ಮೊಬೈಲ್, ಲ್ಯಾಂಡ್‌ಲೈನ್ ಸೇರಿ ತಿಂಗಳಿಗೆ ದೂರವಾಣಿ ಕರೆ ವೆಚ್ಚ ಅಂತಲೇ ತಿಂಗಳಿಗೆ 20 ಸಾವಿರ ರೂ. ಎಂಬಂತೆ ವರ್ಷಕ್ಕೆ 2 ಲಕ್ಷದ 20 ಸಾವಿರ ಪಡೆಯುತ್ತಿದ್ದಾರೆ. ವರ್ಷಕ್ಕೆ 2-3 ಸಾವಿರ ಖರ್ಚು ಮಾಡಿದ್ರೇ ಫ್ರೀ ಕಾಲ್, ಡೇಟಾ ಎಲ್ಲವೂ ಬರುವ ಈಗಿನ ಕಾಲದಲ್ಲಿ ಲಕ್ಷಾಂತರ ರೂಪಾಯಿ ಫೋನ್‌ಗಾಗಿ ಬಳಸ್ತಿದ್ದಾರೆ.
Recommended