ಪೂಜಾ ಹೆಗ್ಡೆಗೆ ಹುಟ್ಟುಹಬ್ಬದ ಸಂಭ್ರಮ

  • 3 years ago
ಟಾಲಿವುಡ್‌ನಲ್ಲಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿ ನಟಿ ಪೂಜಾ ಹೆಗ್ಡೆಗೆ ಇಂದು (ಅ.13) ಹುಟ್ಟುಹಬ್ಬದ ಸಂಭ್ರಮ. ಸದ್ಯ ತೆಲುಗಿನಲ್ಲಿ ಪೂಜಾ ಭಾರಿ ಡಿಮ್ಯಾಂಡ್ ಇದೆ. ಅಲ್ಲು ಅರ್ಜುನ್ ಜೊತೆ 'ಧುವ್ವಡ ಜಗನ್ನಾಥಂ', ಜೂ. ಎನ್‌ಟಿಆರ್ ಜೊತೆ 'ಅರವಿಂದ ಸಮೇತ', ಮಹೇಶ್ ಬಾಬು ಜೊತೆಗಿನ 'ಮಹರ್ಷಿ' ಸಿನಿಮಾಗಳು ಪೂಜಾಗೆ ಸ್ಟಾರ್‌ಗಿರಿ ತಂದುಕೊಟ್ಟಿವು. ಹಾಗೆಯೇ 2020ರಲ್ಲಿ ತೆರೆಕಂಡ 'ಅಲಾ ವೈಕುಂಠಪುರಮುಲೋ' ಸಿನಿಮಾದ ದೊಡ್ಡ ಯಶಸ್ಸಿನಿಂದ ಪೂಜಾಗೆ ಬೇಡಿಕೆ ಹೆಚ್ಚಿದೆ. ಸದ್ಯ ಪೂಜಾ ಹೆಗ್ಡೆ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ. ಯಾಕೆಂದರೆ, ತೆಲುಗಿನಲ್ಲಿ ಅಖಿಲ್ ಅಕ್ಕಿನೇನಿ ಜೊತೆ ನಟಿಸಿರುವ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಪ್ರಭಾಸ್ ಜತೆಗಿನ 'ರಾಧೆ ಶ್ಯಾಮ್' ಸಿನಿಮಾ ಜನವರಿ ಮೊದಲ ವಾರದಲ್ಲಿ ರಿಲೀಸ್‌ ಆಗಲಿದೆ. ಚಿರಂಜೀವಿ ಮತ್ತು ರಾಮ್ ಚರಣ್ ನಟಿಸಿರುವ ಆಚಾರ್ಯ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ರಣ್‌ವೀರ್ ಸಿಂಗ್ ಜೊತೆ 'ಸರ್ಕಸ್' ಮತ್ತು ಸಲ್ಮಾನ್ ಖಾನ್ ಜೊತೆ ಒಂದು ಸಿನಿಮಾವನ್ನು ಪೂಜಾ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ತಮಿಳಿನ 'ದಳಪತಿ' ವಿಜಯ್ ನಟನೆಯ ಬೀಸ್ಟ್ ಸಿನಿಮಾಕ್ಕೂ ಪೂಜಾ ಹೆಗ್ಡೆಯೇ ನಾಯಕಿ! ಆ ಸಿನಿಮಾದ ನಟನೆಗಾಗಿ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.

Recommended